April 18, 2025

ಪಬ್ಲಿಕ್ ರೈಡ್ ಹುಬ್ಬಳ್ಳಿ

ಹುಬ್ಬಳ್ಳಿ ಹೊರವಲಯದ ಗೂಡೌನನಲ್ಲಿ ಅಂಗನವಾಡಿ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ ಪ್ರಕರಣದ ಪ್ರಮುಖ ಕೈ ಪಕ್ಷದ ಆರೋಪಿಯಾಗಿರುವ ಬತುಲ್ ಕಿಲ್ಲೇದಾರ್ ಅವರನ್ನು ಅಮಾನತು ಮಾಡಿ ಜಿಲ್ಲಾಧ್ಯಕ್ಷರು ಅದೇಶ ಹೊರಡಿಸಿದ್ದಾರೆ.

ನಗರದ ಗಬ್ಬೂರಿನ ಹೊರವಲಯದಲ್ಲಿ ಗೋಡೌನ್ ಒಂದರಲ್ಲಿ ಅಕ್ರಮವಾಗಿ ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನ ಬತುಲ್ ಕಿಲ್ಲೇದಾರ್ ನನ್ನು ಪಕ್ಷದಿಂದ ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಮಾಹಾನಗರ ಘಟಕದ ಜಿಲ್ಲಾಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ ಅಮಾನತು ಮಾಡಿ ಅದೇಶಿಸಿದ್ದಾರೆ. 2021 ರಲ್ಲಿ ಪಾಲಿಕೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಬತುಲ್, ಹುಧಾ ವಾರ್ಡ್ ನಂ. 77 ರಿಂದ ಸ್ಪರ್ಧೆ ಮಾಡಿದ್ದಳು.

ಇದೀಗ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಪ್ರಕರಣದಡಿಯಲ್ಲಿ, ಹುಬ್ಬಳ್ಳಿಯಿಂದ ಪರಾರಿಯಾಗಿರೋ ಬುತುಲ್ ಕಳೆದ ವಾರ ಬತುಲ್ ಪತಿ ಫಾರೂಕ್ ಗೆ ಸೇರಿದ ಗೋಡೌನ್ ನಲ್ಲಿ ಮಕ್ಕಳ ಆಹಾರವನ್ನು ಸಂಗ್ರಹ ಮಾಡಲಾಗಿತ್ತು, ಅಕ್ರಮವಾಗಿ ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡಿದ ಹಿನ್ನಲೆಯಲ್ಲಿ ಅಧಿಕಾರಿಗಳು ದಾಳಿ ಮಾಡಿ ಹಲವರನ್ನು ಜೈಲಿಗಟ್ಟಿದ್ದರು. ಕೊನೆಗೂ ಎಚ್ಚೆತ್ತುಕೊಂಡ ಕೈ ಪಕ್ಷದ ಜಿಲ್ಲಾಧ್ಯಕ್ಷರು ಪ್ರಕರಣದ ಪ್ರಮುಖ‌ ಆರೋಪಿಯನ್ನು ಅಮಾನತು ಮಾಡಿದ್ದಾರೆ. ಬತುಲ್ ಕಿಲ್ಲೇದಾರ ಪತಿ ಫಾರೂಕ್ ಸೇರಿ ಕಸಬಾ ಪೇಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರ ವಿರುದ್ಧ ದೂರು ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಪಕ್ಷಕ್ಕೆ ಮುಜುಗರ ಮಾಡಿರೋ ಕಾರ್ಯಕರ್ತೆ ಬತುಲ್ ಅವರನ್ನು ಅಮಾನತುಗೊಳ್ಳಿದಲಾಗಿದೆ.

Leave a Reply

Your email address will not be published. Required fields are marked *

error: Content is protected !!