
ಧಾರವಾಡ: ತಾಯಿ ಅಂದ್ರೇ ಅದಕ್ಕೆ ನಮ್ಮ ದೇಶದಲ್ಲಿಯೇ ವಿಶೇಷ ಸ್ಥಾನವನ್ನು ನಮ್ಮ ಹಿರಿಯರು ನೀಡಿ ಹೋಗಿದ್ದಾರೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಕೆಲವಂದಿಷ್ಟು ಘಟನೆಗಳು ತಾಯಿತನದ ಅರ್ಥ ಕಳೆಯಿವವರು ಕೂಡಾ ಇದ್ದಾರೆ. ಈ ಎಲ್ಲದರ ಮಧ್ಯೆ ಇಲ್ಲೊಂದು ಶ್ವಾನ ತನ್ನ ಮರಿಯನ್ನು ಕಳೆದುಕೊಂಡು ಮರುಗುವುದರ ಜತೆಗೆ, ಅಂತ್ಯಕ್ರಿಯೆ ವೇಳೆ ಕೊನೆಯದಾಗಿ ಮರಿಗೆ ಮುತ್ತಿಡುವ ಮೂಲಕ ತನ್ನ ತಾಯಿ ಪ್ರೀತಿಯನ್ನು ತೋರಿದ್ದು, ನೋಡುಗರ ಕಣ್ಣಲ್ಲಿ ಕಣ್ಣೀರು ಹಾಕಿಸುವಂತಿತ್ತು.
ಧಾರವಾಡದ ನವಲೂರು ಗ್ರಾಮದ ಹೊರವಲಯದ ರಾಯಪುರ ಇಂಡಸ್ಟ್ರೀಸ್ ಏರಿಯಾಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೂತನ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಗುರುವಾರ ತಡ ರಾತ್ರಿ ವೇಳೆ ನೂತನ ಲೇಔಟ್ ಮುಖ್ಯ ರಸ್ತೆಯಲ್ಲಿ ಮರಿ ಶ್ವಾನ ನಿಧನವಾಗಿತ್ತು. ಗುರು ರಾಯರ ಭಕ್ತ ತನ್ನ ಮನೆಗೆ ಬಂದಿದ್ದಾನೆ. ಈ ವೇಳೆ ಮರಿ ಶ್ವಾನ ನಿಧನದ ದುಃಖದಲ್ಲಿದ ತಾಯಿ ಶ್ವಾನ ರಾಯರ ಭಕ್ತನ ಬೈಕ್ ನೋಡುತ್ತಲೇ ಓಡಿ ಹೋಗಿ ತನ್ನು ದುಃಖ ತೋರ್ಪಡಿಸಿದೆ. ಕೂಡಲೇ ಮರಿ ಶ್ವಾನ ರಸ್ತೆಯಲ್ಲಿ ಬಿದಿದ್ದನ್ನು ನೋಡಿ ಮರಿ ಶ್ವಾನ ಅರೋಗ್ಯ ಪರಿಶೀಲನೆ ಮಾಡಿದ್ದಾನೆ ನಂತರ ನಿಧನವಾಗಿರುವುದು ಖಚಿತವಾಗಿದೆ.
ಕೂಡಲೇ ಮರಿ ಶ್ವಾನವನ್ನು ಅಂತ್ಯಕ್ರಿಯೆ ಮಾಡಲು ಮುಂದಾಗಿ ಗುಂಡಿ ತೋಡಿದ್ದಾನೆ, ಆಗ ತಾಯಿ ಶ್ವಾನ ಮರಿಯನ್ನು ಗುಂಡಿಯಲ್ಲಿ ಮಲಗಿಸುತ್ತಿದಂತೆ, ತನ್ನ ಮಗುವಿನ ಮುಖ ನೋಡಿ ಮೈ ಸೌರಿಸುತ್ತಿರುವ ದೃಶ್ಯ ಎಂತ ಕಲ್ಲು ಹೃದಯವನ್ನು ಕರಗಿಸುವಂತಿತ್ತು. ಆಧುನಿಕ ಜಗತ್ತಿನಲ್ಲಿ ಹಣಗಳಿಕೆಯ ಜನರ ಮಧ್ಯ ಶ್ವಾನದ ಮರಿಯನ್ನು ಕುಂಕುಮ ಭಂಡಾರ ಹಚ್ಚಿ ಅಂತ್ಯಕ್ರಿಯೆ ಮಾಡಿಸಿದ್ದು ಗುರುವಾರ ಇದ್ದ ಕಾರಣವೇ ಗುರು ರಾಯರೆ ಮುಂದೆ ನಿಂತು ತನ್ನ ಭಕ್ತನ ಕೈಯಲ್ಲಿ ಈ ಕಾರ್ಯ ಮಾಡಿಸಿದ್ದಾರೆ ಎನ್ನುವಂತಿತ್ತು….