
ಪಬ್ಲಿಕ್ ರೈಡ್ ಧಾರವಾಡ
ಮನೆಯ ಆಚೆ ಆಟವಾಡುತ್ತಿದ್ದ ಮಗುವಿನಮೇಲೆ ಮೂರು ಬೀದಿ ನಾಯಿಗಳು ಏಕಾಏಕಿ ದಾಳಿ ಮಗುವಿಗೆ ಕಚ್ಚಿ ಗಾಯಪಡಿಸಿರೋ ಘಟನೆ ಧಾರವಾಡದ ಮಾಳಾಪುರ ಬಡವಾಣೆಯಲ್ಲಿ ನಡೆದಿದ್ದು, ನಾಯಿಗಳ ಅಟಹಾಸಕ್ಕೆ ಸ್ಥಳೀಯ ಬಡಾವಣೆಯ ನಿವಾಸಿಗಳು ಬೆಚ್ಚಿಬಿದಿದ್ದಾರೆ.
ಧಾರವಾಡ ಮಾಳಾಪುರ ಬಡವಾಣೆಯ ಅಸ್ಮಾ ಒಂಟಿ ಮಗುವಿನ ಮೇಲೆ ನಾಯಿಗಳು ಅಟಹಾಸ ತೋರಿವೆ. ಇನ್ನೂ ಮೂರು ಬೀದಿ ನಾಯಿಗಳ ಮಗುವಿನ ಕಾಲು, ಕೈ ಸೇರಿ ದೇಹದ ಹಲವು ಕಡೆಗಳಲ್ಲಿ ಕಚ್ಚಿ ಗಾಯಪಡಿಸಿದ್ದು, ಮಗು ನಾಯಿಗಳ ದಾಳಿಯಿಂದ ಬೆಚ್ಚಿಬಿದಿದೆ. ಮಗುವಿನತಂದೆ ವಾಚಮನ್ ಕೆಲಸ ಮಾಡುತ್ತಿದ್ದು, ಮನೆಯ ಒಳಗೆ ಎಲ್ಲರು ಇರುವಾಗ ನಾಯಿಗಳು ಏಕಾ ಏಕಿದಾಳಿ ಮಾಡಿವೆ.
ಮಗು ಕಿರುಚಾಡುವುದನ್ನು ಕೇಳಿ ಹೊರ ಬಂದು ನೋಡಿದಾಗ ನಾಯಿಗಳು ಮಗುವಿಗೆ ಕಚ್ಚಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಗವನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ನಾಯಿಗಳ ಮಗುವಿನ ಮೇಲೆ ದಾಳಿ ವಿಷಯ ತಿಳಿದ ಸ್ಥಳಿಯರು ಕೂಡಾ ಘಟನೆಯಿಂದ ಬೆಚ್ಚಿಬಿದಿದ್ದಾರೆ. ಧಾರವಾಡ ಉಪನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.