
ಧಾರವಾಡ
ಬೀಜ ಸಂಗ್ರಹ ಘಟಕದಲ್ಲಿ ರೈತರಿಗೆ ಬಿತ್ತನೆ ಮಾಡಲು ನೀಡುವ ಉದ್ದೇಶದಿಂದ ಇಡಲಾಗಿದ್ದ ಸುಮಾರು ಎರಡು ಲಕ್ಷ ಮೌಲ್ಯದ ಕಡಲೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖದೀಮ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಧಾರವಾಡ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರುಣ್ ಮಾಡಮಗೇರಿ, ಪ್ರಕಾಶ್ ಹುಬ್ಬಳ್ಳಿ, ಮಂಜುನಾಥ ಜಮುನಾಳ ಬಂಧಿತ ಕಡಲೆ ಕಳ್ಳರಾಗಿದ್ದಾರೆ. ಧಾರವಾಡದ ಸರ್ಕಾರಿ ಬೀಜ ನಿಗಮ ಘಟಕದಲ್ಲಿ ರೈತರಿಗೆ ಬಿತ್ತನೆಗೆ ವಿತರಿಸುವ ಉದ್ದೇಶದಿಂದ ಕಡಲೆಯನ್ನು ಸಂಗ್ರಹಿಸಿ ಇಡಲಾಗಿತ್ತು. ಬಂಧಿತ ಆರೋಪಿಗಳು ಕಡಲೆಯನ್ನು ಚೀಲಗಳನ್ನೇ ಎಗರಿಸಿಕೊಂಡು ಪರಾರಿಯಾಗಿದ್ದರು. ಈ ಕುರಿತು ದೂರು ಪಡೆದುಕೊಂಡ ಧಾರವಾಡ ಉಪನಗರ ಠಾಣೆಯ ಸಿಪಿಐ ದಯಾನಂದ ಆ್ಯಂಡ್ ಟೀಂ, ಕಳ್ಳತನ ನಡೆದ ಇಪ್ಪತ್ತನಾಲ್ಕು ಘಂಟೆಯಲ್ಲಿ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನೂ ಬಂಧಿತರಿಂದ ಎರಡು ಬೈಕ್ ಸೇರಿ 12 ಚೀಲ ಕಡಲೆಯನ್ನು ಜಪ್ತ್ ಮಾಡಿದ್ದಾರೆ. ಸದ್ಯ ಆರೋಪಿಗಳ ವಿಚಾರಣೆ ಪೂರ್ಣಗೊಂಡ ಹಿನ್ನಲೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಖದೀಮ ಕಳ್ಳರನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.