
ಧಾರವಾಡ
ಮುಂದೆ ಸಾಗುತ್ತಿದ್ದ ಲಾರಿವೊಂದಕ್ಕೆ ಹಿಂಬದಿಯ ಲಾರಿ ಡಿಕ್ಕಿಯಾದ ಪರಿಣಾಮ ಘಟನೆಯಲ್ಲಿ ಓರ್ವ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ ಪೆಪ್ಸಿ ಫ್ಯಾಕ್ಟರಿ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಎರಡು ಲಾರಿಗಳು ಧಾರವಾಡದಿಂದ ಬೆಳಗಾವಿ ತೆರಳುವ ಮಾರ್ಗದಲ್ಲಿ ಸಾಗುತ್ತಿದ್ದವು, ಈ ವೇಳೆ ಪೆಪ್ಸಿ ಫ್ಯಾಕ್ಟರಿ ಬಳಿ ಎರಡು ವಾಹನಗ ಮಧ್ಯ ಅಪಘಾತವಾಗಿದೆ. ಗಾಯಾಳ ಹೆಸರು ಪೊಲೀಸ್‌ರ ಪರಿಶೀಲನೆ ಬಳಿಕ ತಿಳಿದು ಬರಬೇಕಾಗಿದೆ. ಇನ್ನೂ ದುರ್ಘಟನೆಗೆ ಪೆಪ್ಸಿ ಫ್ಯಾಕ್ಟರಿ ಬಳಿ ರಸ್ತೆಗೆ ಹಾಕಿರೋ ಸ್ಪೀಡ್ ಬ್ರೆಕರ್ ಎಂದು ಹೇಳಲಾಗುತ್ತಿದೆ.
ಇತ್ತಿಚ್ಚೆಗೆ ಇಲ್ಲಿ ಸ್ಪೀಡ್ ಬ್ರೇಕರ್ ಹಾಕಲಾಗಿದ್ದು, ಆದರೆ ಯಾವುದೇ ಸ್ಪೀಡ್ ಬ್ರೇಕರ ಸೈನ್ ಬೋರ್ಡ್‌ಗಳ ಇಲ್ಲದಿರುವುದು ಮುಂಬದಿ ಲಾರಿ ಚಾಲಕನ ಗಮನಕ್ಕೆ ಬಂದಿಲ್ಲ. ಹತ್ತಿರ ಬಂದಾಗ ಗಮನಕ್ಕೆ ಬಂದ ಹಿನ್ನಲೆಯಲ್ಲಿ, ಮುಂದಿನ ಲಾರಿ ಚಾಲಕ ಏಕಾಏಕಿ ವೇಗ ನಿಯಂತ್ರಣ ಮಾಡಿದ್ದಾನೆ. ಇದರಿಂದಾಗಿ ಹಿಂಬದಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮುಂದಿನ ಲಾರಿ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಹಿಂಬದಿ ಗಾಯಾಳು ಲಾರಿ ಚಾಲಕನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿ ಮಾಡಲಾಗಿದೆ. ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.