
ಧಾರವಾಡ
ದ್ವಿ ಚಕ್ರ ವಾಹನಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಓರ್ವ ಚಾಲಕಿ ಕಳ್ಳನನ್ನು ಹಿಡಿಯುವಲ್ಲಿ ಧಾರವಾಡ ಉಪನಗರ ಠಾಣೆಯ ಸಿಪಿಐ ದಯಾನಂದ ಆ್ಯಂಡ್ ಟೀಂ ಯಶಸ್ವಿಯಾಗಿದೆ.
ಸಂಜಯ ಶಿವಾಜಿ ಚೌಹಾನ್ ಬಂಧಿತ ಚಾಲಾಕಿ ಬೈಕ್ ಕಳ್ಳನೆಂದು ಗುರುತಿಸಲಾಗಿದೆ. ಧಾರವಾಡ ನ್ಯೂ ಬಸ್ ನಿಲ್ದಾಣ, ಕಾರ್ಪೊರೇಷನ್ ವೃತ ಸೇರಿ ಜಿಲ್ಲಾಸ್ಪತ್ರೆ ಬಳಿ ಬೈಕ್ ಕಳ್ಳತನ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಉಪನಗರ ಠಾಣೆಯ ಸಿಪಿಐ ದಯಾನಂದ ಆ್ಯಂಡ ಟೀಂ ಕಾರ್ಯಾಚಾರಣೆ ನಡೆಸಿ ಓರ್ವ ಆರೋಪಿಯನ್ನು ಹೆಡೆಮುರಿ ಕಟ್ಟಿವಲ್ಲಿ ಪೊಲೀಸರು ಸಕ್ಸಸ್ ಆಗಿದ್ದಾರೆ.
ಇನ್ನೂ ಬಂಧಿತ ಆರೋಪಿಯಿಂದ ಐದು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿಯ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಈಗ ಆರೋಪಿಯನ್ನು ಕಂಬಿಹಿಂದೆ ತಳ್ಳಿಲಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.