
ಬೆಳಗಾವಿ
ಕಣಗಲಾ ಗ್ರಾಮದ ಪ್ರತಿ ಮೂರು ವರ್ಷಕ್ಕೊಮ್ಮೆ ಫೇಬ್ರುವರಿ 21 ರಿಂದ ಫೇಬ್ರುವರಿ 25 ರವರೆಗೆ ಜರಗುವ ಶ್ರೀ ಮಹಾಲಕ್ಷ್ಮೀ ಜಾತ್ರೆಯ ಅಂಗವಾಗಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಿನಾಂಕ:13-02-2025 ರಂದು ಸಭೆ ಜರುಗಿತು.
ಸದರಿ ಸಭೆಯಲ್ಲಿ ಸಂಕೇಶ್ವರ ಪೋಲಿಸ ಠಾಣೆಯ ಸಿ.ಪಿಐ, ಪಿ.ಎಸ್.ಐ ಹಾಗೂ ಪೋಲಿಸ ಸಿಬ್ಬಂದಿ ಬಂದು ಜಾತ್ರೆಯನ್ನು ಶಾಂತತೆಯಿಂದ ಆಚರಣೆ ಮಾಡಲು ಗ್ರಾಮಸ್ಥರಿಗೆ ಕರೆ ನೀಡಿದರು.
ಜಾತ್ರೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳವುದರ ಬಗ್ಗೆ ಮಾಹಿತಿ ನೀಡಿದರು.
ಸದರಿ ಸಭೆಗೆ ಗ್ರಾಮ ಪಂಚಾಯತ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಜಾತ್ರೆಯ ಪಂಚರು, ಹೋಮ ಗಾರ್ಡ್, ಗ್ರಾಮಸ್ಥರು, ಹಾಗೂ ಪತ್ರಕರ್ತರು ಹಾಜರಿದ್ದರು.
ವರದಿಗಾರರು : ಸಂತೋಷ ನಿರ್ಮಲೆ . ಪಬ್ಲಿಕ ರೈಡ್