
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ‘ಆದ್ಯತೆಗನುಗುಣವಾಗಿ ಕ್ಷೇತ್ರದಲ್ಲಿ ಇರುವ ಅನುದಾನವನ್ನುg ಬಳಸಿಕೊಂಡು ತ್ವರಿತಗತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ’, ಎಂದು ಶಾಸಕ ಎಸ್ ಮುನಿರಾಜು ಹೇಳಿದರು..
ಸಪ್ತಗಿರಿ ಆಸ್ಪತ್ರೆ ಸಮೀಪದ ಚಿಕ್ಕಸಂದ್ರ ಗೇಟ್ ಮುಂಭಾಗದ ಹೆಸರಘಟ್ಟ ಮುಖ್ಯರಸ್ತೆಯ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಶೆಟ್ಚಿಹಳ್ಳಿ ವಾರ್ಡ್ ಬಿಜೆಪಿ ಅಧ್ಯಕ್ಷರಾದ ಶೆಟ್ಟಿಹಳ್ಳಿ ಬಿ ಸುರೇಶ್, ‘ನಮ್ಮ ಮುನಿರಾಜಣ್ಣನವರು ಶಾಸಕರಾದ ಮೇಲೆ ಅಭಿವೃದ್ಧಿ ಕಾಣದ ರಸ್ತೆಗಳಿಗೂ ಕೂಡಾ ಡಾಂಬರೀಕರಣವಾಗುತ್ತಿದ್ದು ಸರಿಯಾದ ರೀತಿಯಲ್ಲಿ ಅನುದಾನ ಸಿಕ್ಕಿದ್ದರೆ ಕ್ಷೇತ್ರದ ಚಿತ್ರೀಕರಣವೇ ಬದಲಾಗುತ್ತಿತ್ತು’, ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಟಿ.ಎಸ್ ಗಂಗರಾಜು, ಬಿ.ಎಂ ನಾರಾಯಣ್, ದಯಾನಂದ್, ರಾಘು ಸೂರ್ಯ, ಬಿ.ಎಂ ಕೃಷ್ಣ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.