
ಧಾರವಾಡ
ತೀವ್ರ ಕುತೂಹಲ ಮೂಡಿಸಿದ ಮುಡಾ ಪ್ರಕರಣ ಸಿಬಿಐ ತನಿಖೆಗೆ ನೀಡುವ ಸ್ನೇಹ ಮಯಿ ಕೃಷ್ಣ ಅವರ ಅರ್ಜಿ ವಿಚಾರಣೆ ತೀರ್ಪು ಇಂದು ಧಾರವಾಡ ಹೈಕೋರ್ಟ್‌ನಲ್ಲಿ ಪ್ರಕಟವಾಗಿದ್ದು, ಸ್ನೇಹಮಯಿ ಕೃಷ್ಣ ಅವರ ಅರ್ಜಿ ವಜಾ ಮಾಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಹೈಕೋರ್ಟನಲ್ಲಿ ಸ್ನೇಹ ಮಯಿ ಕೃಷ್ಣರವರು ಸಿಎಂ ವಿರುದ್ಧ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಹೈಕೋರ್ಟ್ ಗೌರವಾನ್ವಿತ ನ್ಯಾಯಾಧೀಶರಾದ ನಾಗಪ್ರಸನ್ನರು ಅರ್ಜಿ ವಿಚಾರಣೆ ನಡೆಸಿದರು. ಬೆಂಗಳೂರು ಹಾಗೂ ಧಾರವಾಡ ಹೈಕೋರ್ಟ ಫೀಠದಲ್ಲಿ ನ್ಯಾಯಾಧೀಶರು ಅರ್ಜಿ ವಿಚಾರಣೆ ನಡೆಸಿದ್ದರು.
ಇತ್ತೀಚೆಗೆ ಹೈಕೋರ್ಟ್ ಗೌರವಾನ್ವಿತ ನ್ಯಾಯಾಧೀಶರಾದ ನಾಗಪ್ರಸನ್ನರವರು ಧಾರವಾಡ ಹೈಕೋರ್ಟ್ ನಲ್ಲಿ ಕಾರ್ಯ ನಿರ್ವಹಿಸಿದ್ದರಿಂದ, ಈಗ ಧಾರವಾಡ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಪೂರ್ಣಗೊಂಡು ಇಂದು ತೀರ್ಪು ಹೊರ ಬಿದಿದೆ. ಕೊನೆಗೂ ಈಗ ನ್ಯಾಯಾಧೀಶರು ಸ್ನೇಹಮಯಿ ಕೃಷ್ಣರವರ ಅರ್ಜಿ ವಜಾಗೊಂಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ.