
ಪಬ್ಲಿಕ್ ರೈಡ್ ಹುಬ್ಬಳ್ಳಿ
ಇಂದು ಬೆಳಗಿನ ಜಾವ 3-45 ಸುಮಾರಿಗೆ ಪೇಪರ್ ಹಾಕುವ ರವಿ ಸಹಿತ ಕೆಲವು ಬೈಕ್ ಸವಾರರಿಗೆ ಇರಿದು ಹಣ ದೋಚಲು ಯತ್ನಿಸಿದ ಬಗ್ಗೆ ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಕೂಡಲೇ ಕಾರ್ಯಾಚರಣೆಗೆ ಇಳಿದ ಬೆಂಡಿಗೇರಿ ಠಾಣೆ ಪೊಲೀಸ ಇನ್ಸ್ಪೆಕ್ಟರ್ ಎಸ್ ಆರ್ ನಾಯಕ ನೇತೃತ್ವದ ತಂಡ ಗಬ್ಬುರ ಮೆಟ್ರೊ ಮಳಿಗೆ ಬಳಿ ಆರೋಪಿಗಳನ್ನು ಚೆಕ್ ಪೋಸ್ಟ್ ಬಳಿ ತಡೆಯಲು ಮುಂದಾಗಿದ್ದಾರೆ. ಆದರೆ ಆರೋಪಿತರು ಚೆಕ್ ಪೋಸ್ಟ್ ಬ್ಯಾರಿಕೇಡ್‌ಗೆ ಗುದ್ದಿ ಮುಂದೆ ಪರಾರಿಯಾಗಲು ಸಾಗುವ ವೇಳೆ ಪೊಲೀಸರು ಬಂಧಿಸಲು ಮುಂದಾಗಿದ್ದಾರೆ.
ಈ ವೇಳೆ ಗುಜರಾತ ಮೂಲದ ನಿಲೇಶ ಹಾಗೂ ದೀಪಕ ಇಬ್ಬರು ಆರೋಪಿಗಳು ಪೊಲೀಸರ ಮೇಲೆ ಕಲ್ಲು ಸೇರಿ ಇತರೆ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಗಾಳಿಯಲ್ಲಿ ಫೈರ ಮಾಡಿ ಎಚ್ಚರಿಕೆ ನೀಡಿದ್ದಾರೆ. ಆದರೂ ಕೂಡಾ ಆರೋಪಿತರ ಎಚ್ಚರಿಕೆ ಜಗ್ಗದ ಹಿನ್ನಲೆಯಲ್ಲಿ, ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಫೈರ ಮಾಡಿ ಬಂಧಿಸಿದ್ದಾರೆ. ಘಟನೆಯಲ್ಲಿ ಪಿಎಸ್‌ಐ ಅಶೋಕ್ ಮತ್ತು ಸಿಬ್ಬಂದಿ ಶರಣು ಇಬ್ಬರಿಗೂ ಗಾಯಗೊಂಡಿದ್ದು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಐವರು ತಂಡ ಪೇಪರ್ ಬಾಯ್ ರವಿ ಅವರ ಬೈಕ್ ಕಸಿದು ಪರಾರಿಯಾಗಿದ್ದು, ದೂರು ದಾಖಲಾಗಿದೆ. ಪೊಲೀಸ್ ಆಯುಕ್ತ ಶಶಿಕುಮಾರ್ ಕೆಎಂಸಿ ಗೆ ಭೇಟಿ ನೀಡಿದ್ದು, ಪೊಲೀಸ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿ ಆರೋಪಿತರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನೂ ಈ ಇಬ್ಬರು ಆರೋಪಿಗಳ ಮೇಲೆ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳುದು ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.