ಹುಬ್ಬಳ್ಳಿ: ನಗರ ನಿವಾಸಿಗಳಿಂದ ಪ್ರತಿಯೊಂದು ಹಂತದಲ್ಲಿ ಟ್ಯಾಕ್ಸ್ ವಸೂಲಿ ಮಾಡೋ ಪಾಲಿಕೆಯ ಅಧಿಕಾರಿಗಳಿಗೆ ಜನರ ಸಮಸ್ಯೆ ಮಾತ್ರ ಕಾಣದಾಗಿದ್ದು, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಬ್ಬಳ್ಳಿ ವಾರ್ಡ್ ನಂಬರ 51ರ ಆನಂದ ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮೇರೆಯುತ್ತಿದ್ದರು ಕ್ರಮ ಕೈಗೊಳ್ಳದೆ ಇರುವುದು ಕೈಗನ್ನಡಿಯಾಗಿದೆ.

ವಾರ್ಡ ನಂಬರ್ 51ರ ನ್ಯೂ ಆನಂದ ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸದಿಂದಾಗಿ ಅನೇಕ ಚಿಕ್ಕಮಕ್ಕಳು ಹೊರ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅನೇಕ ಮಕ್ಕಳಿಗೆ ಇಲ್ಲಿನ ಬೀದಿ ನಾಯಿಗಳು ಕಚ್ಚಿದ ಉದಾಹರಣೆಗಳು ಸಾಕಷ್ಟಿದ್ದು, ಇದರ ಬಗ್ಗೆ ಸ್ಥಳೀಯರು ಪಾಲಿಕೆಯ ಸಹಾಯವಾಣಿಯ ಮೂಲಕ ದೂರು ಕೂಡಾ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಪಾಲಿಕೆಯ ರೆಸ್ಪಾನ್ಸ್ ಮಾತ್ರ ಶೂನ್ಯವಾಗಿದೆ. ಇದರಿಂದಾಗಿ ದಿನ ಮುಂಜಾನೆಯಾದ್ದರೆ ಇಲ್ಲಿನ ನಿವಾಸಿಗಳು ಪಾಲಿಕೆ ಆಡಳಿತ ವ್ಯವಸ್ಥೆ ವಿರುದ್ಧ ಹಿಡಿ ಶಾಪ ಹಾಕುವಂತಾಗಿದೆ.

