
ಹುಬ್ಬಳ್ಳಿ: ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರಿಗೆ ಗಂಭೀರವಾಗಿ ಗಾಯಗಳಾದ ಘಟನೆ, ಗಬ್ಬೂರು ಹೊರವಲಯದ ಜೈನ್ ಮಂದಿರ ಬಳಿ ಇಂದು ನಡೆದಿದೆ.
ಇನ್ನು ಬೈಕ ಸವಾರರಾದ ನೂಲ್ವಿ ಗ್ರಾಮದ ಕಿರಣ ಮೊಕಾಶಿ, ಯತೀಶ್ ಮೊಕಾಶಿ ಎಂಬುವರೆ ಗಾಯಗೊಂಡಿದ್ದು ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಕಾರು ಚಾಲಕ ಛಬ್ಬಿ ಗ್ರಾಮದ ಪಾಂಡುರಂಗ ಹರಿಜನ ಎಂದು ತಿಳಿದು ಬಂದಿದ್ದು, ರಭಸವಾಗಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗವು ಕೂಡಾ ಜಖಂಗೊಂಡಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸರು ಆಗಮಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.