
ಹುಬ್ಬಳ್ಳಿ: ಹುಟ್ಟು ಹಬ್ಬದ ಆಚರಣೆಯಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ಇರಿದ ಘಟನೆ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ದಿನ ತಡರಾತ್ರಿ ನಡೆದಿದೆ.
ಜಬಿಉಲ್ಲಾ ಬಳ್ಳಾರಿ (35) ಹಲ್ಲೆಗೆ ಒಳಗಾದ ವ್ಯಕ್ತಿ ಯಾಗಿದ್ದು, ಸಿರಾಜ್ (44) ಎಂಬಾತನೇ ಚಾಕು ಇರಿದ ಆರೋಪಿಯಾಗಿದ್ದಾನೆ.
ಕಳೆದ ದಿನ ತಡರಾತ್ರಿ ಜಬಿಉಲ್ಲಾನು ಹುಟ್ಟು ಹಬ್ಬದ ಆಚರಣೆ ಮಾಡಿಕೊಳ್ಳುತ್ತಿದ್ದಾಗ ಬೇರೊಂದು ಗುಂಪಿನ ಸದ್ಯಸ್ಯ ಸಿರಾಜ್ ಎಂಬಾತನ ಜೊತೆ ಮಾತಿಗೆ ಮಾತು ಬೆಳೆದು ಜಗಳವಾಗಿ ಜೇಬಿಉಲ್ಲಾ ನನ್ನು ಚಾಕುವಿನಿಂದ ಇರಿದು ಸಿರಾಜ್ ಪರಾರಿಯಾಗಿದ್ದ,ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಬಂದ ಎಪಿಎಂಸಿ ಠಾಣಾ ಇನ್ಸ್ಪೆಕ್ಟರ್ ಸಮಿಯುಲ್ಲಾ ಖಾನ್ ಅವರು ಪರಿಶೀಲಿಸಿ ಸ್ಥಳೀಯರ ಮಾಹಿತಿ ಪಡೆದು ಆರೋಪಿಯನ್ನು ಕೆಲವೇ ಘಂಟೆಗಳಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇನ್ನು ಹಲ್ಲೆಗೆ ಒಳಗಾದ ವ್ಯಕ್ತಿ ಜಬಿಉಲ್ಲಾ ನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ್ ನಾಯಕ್ ಬೇಟಿ ನೀಡಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.