
ಪಬ್ಲಿಕ್ ರೈಡ್ ಹುಬ್ಬಳ್ಳಿ: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೌಕರಿ ಕೊಡಿಸುತ್ತೇನೆ ಎಂದು ಹೇಳಿ ಅಮಾಯಕ ರೊಬ್ಬರಿಗೆ ಲಕ್ಷಾಂತರ ರೂಪಾಯಿ ಪಡೆದುಕೊಂಡು ವಂಚನೆ ಮಾಡಿದ ತಂದೆ ಮಗನನ್ನು ಬಂಧಿಸಿರುವ ಘಟನೆ ನಡೆದಿದೆ.
ರಾಜೇಂದ್ರ ಶಾಂತಪ್ಪ ಕೊಕಟನೂರು ಹಾಗೂ ಕಾರ್ತಿಕ ತಂದೆ ರಾಜೇಂದ್ರ ಕೊಕಟನೂರು ಆರೋಪಿಗಳಾಗಿದ್ದಾರೆ.
ಇನ್ನು ಮಿಥುನ ಲಕ್ಷ್ಮಣ ತೋಡಕರ ಎಂಬ ವ್ಯಕ್ತಿಯೇ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದು, ರಾಜೇಂದ್ರ ಮತ್ತು ಕಾರ್ತಿಕ ಎಂಬ ತಂದೆ ಮಗ ಸೇರಿಕೊಂಡು ಮಿಥುನ ನ ಸ್ನೇಹ ಬೆಳೆಸಿ ಅವನೊಂದಿಗೆ ನಿನಗೆ ಕೆಲಸ ಕೊಡಿಸುತ್ತೇವೆ ನಮಗೆ ದೊಡ್ದ ವ್ಯಕ್ತಿಗಳ ಪರಿಚಯವಿದೆ ಎಂದು ನಂಬಿಸಿ, ನಿನಗೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿ ಹಂತ ಹಂತವಾಗಿ ನಂಬಿಸಿ ಅವರಿಂದ ಸುಮಾರು 61.25.000/- ರೂ. ಹಣವನ್ನು ಪಡೆದುಕೊಂಡಿದ್ದಾರೆ.
ಸದ್ಯ ತಂದೆ ಮಗನ ವಿರುದ್ದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡು ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.
ಸಂತೋಷ ಮೆದಾರ ಹುಬ್ಬಳ್ಳಿ