
ಪಬ್ಲಿಕ್ ರೈಡ್ ಹುಬ್ಬಳ್ಳಿ: ಪ್ರಯಾಗರಾಜನಲ್ಲಿ ನಡೆಯುತ್ತಿರುವ ಮಹಾಕುಂಬಮೇಳಕ್ಕೆ ಬೆಳಗಾವಿಯಿಂದ ತೆರಳಿದ ಬೆಳಗಾವಿಯ ಛತ್ರಪತಿ ಶಿವಾಜಿ ನಗರದ ನಿವಾಸಿ ಮಾಹಾದೇವಿ ಬಾವನೂರ ಮೃತದೇಹವನ್ನು, ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕುಟುಂಬಸ್ಥರ ಕೋರಿಕೆಯ ಮೇರೆಗೆ ಗ್ರಾಮಕ್ಕೆ ರವಾನಿಸಲಾಗಿದ್ದು, ಈಗ ಮಾಹಾದೇವಿಯವರ ಮೃತದೆಹವು ನೂಲ್ವಿ ಗ್ರಾಮ ಆಗಮಿಸಿತು.
ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ಮಾಹಾದೇವಿ ಬಾವನೂರವರು ಬೆಳಗಾವಿಯಿಂದ ಪ್ರಯಾಗರಾಜಕ್ಕೆ ತೆರಳಿದರು. ಆದರೆ ಅಲ್ಲಿ ಹೆಚ್ಚಿನ ಜನಸಂದಣಿಯ ನಡುವೆ ಕಾಲ್ತುಳಿತ ನಡೆದಿದ್ದು, ಬೆಳಗಾವಿ ಮೂಲದ ನಾಲ್ವರು ಮೃತಪಟ್ಟಿದರು. ಅದರಲ್ಲಿ ಮೊದಲ ಹಂತವಾಗಿ ಇಬ್ಬರು ಮೃತ ದೇಹ ಇಂದು ತಡ ಸಂಜೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಳಿದಿದ್ದು, ವಿಮಾನ ನಿಲ್ದಾಣದಲ್ಲಿ ಬೆಳಗಾವಿ ಜಿಲ್ಲಾಡಳಿತದಿಂದ ಮೃತದೇಹಗಳನ್ನು ಬರಮಾಡಿಕೊಂಡು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಅಂತಿಮ ನಮನ ಸಲ್ಲಿಸಲಾಯಿತು. ಈ ವೇಳೆ ಬೆಳಗಾವಿ ಜನಪ್ರತಿನಿಧಿಗಳು ಮೃತರ ದೇಹಗಳಿಗೆ ಹೂವಿನ ಹಾರ ಹಾಕಿ ಶಾಂತಿ ಕೋರಿ, ಕುಟುಂಬಸ್ಥರಿಗೆ ಧೈರ್ಯ ಸಾಂತ್ವನ ಹೇಳಿದರು.
ಮೊದಲ ಹಂತವಾಗಿ ಬೆಳಗಾವಿ ಶೆಟ್ಟಿ ಗಲ್ಲಿಯ ಅರುಣ ಗೋರ್ಪಡೆ, ಮಹಾದೇವಿ ಬಾವನೂರವರ ಇಬ್ಬರ ಮೃತ ದೇಹಗಳು ಆಗಮಿಸಿದ ಹಿನ್ನಲೆಯಲ್ಲಿ, ಮರಣೋತ್ತರ ಪರೀಕ್ಷೆ ಬಳಿಕ ಈಗ ಇಬ್ಬರು ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಇನ್ನೂ ಮಹಾದೇವಿಯವರ ಮೃತ ದೇಹವನ್ನು ಕುಟುಂಬಸ್ಥರ ಕೋರಿಕೆಯ ಮೇರೆಗೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮಕ್ಕೆ ರವಾನಿಸಲಾಗಿದ್ದು, ಮಹಾದೇವಿಯವರ ಅಂತ್ಯಕ್ರಿಯೆಯು ನೂಲ್ವಿ ಗ್ರಾಮದಲ್ಲಿ ಮಾಡಲಾಯಿತು. ಈ ನಡುವೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.