
ಪಬ್ಲಿಕ್ ರೈಡ್ ಹುಬ್ಬಳ್ಳಿ : ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಈಶ್ವರ ನಗರದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಚಾಲಾಕಿ ಕಳ್ಳನನ್ನು ಬಂಧನ ಮಾಡುವಲ್ಲಿ ಕಸಬಾಫೇಟ್ ಪೊಲೀಸರು ಯಶ್ವಿಯಾಗಿದ್ದಾರೆ.
ಮುಂಡಗೋಡ್ ಮೂಲದ ಅಶೋಕ ಸೊನ್ನದ 33 ವರ್ಷದ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸರೋ ಕಸಬಾ ಪೇಟ್ ಪೊಲೀಸರು ಖತರ್ನಾಕ ಕಳ್ಳನನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತನಿಂದ ಚಿನ್ನದ ಎರಡು ಎಳೆಯ ಮಾಂಗಲ್ಯ ಸರ, ಎರಡು ಕಿವಿಯೋಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಇವುಗಳ ಅಂದಾಜು ಮೊತ್ತ 1 ಲಕ್ಷ ರೂಪಾಯಿ ಬೆಲೆ ಬಾಳು ಆಭರಣವಾಗಿವೆ.
ಸದ್ಯ ಆರೋಪಿಯನ್ನು ವಿಚಾರಣೆ ಪೂರ್ಣಗೊಳ್ಳಿಸಿದ ಬೆನ್ನಲೆ ನ್ಯಾಯಾಧೀಶರ ಮುಂದೆ ಕಳ್ಳನನ್ನು ಹಾಜರುಪಡಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಈ ಕುರಿತು ಕಸಬಾಪೇಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.