
ಪಬ್ಲಿಕ್ ರೈಡ್ ಹುಬ್ಬಳ್ಳಿ: ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಮಾಡುತ್ತಿದ್ದ 4 ಜನರನ್ನು ಬಂಧಿಸುವಲ್ಲಿ ಕಸಬಾಫೇಟ್ ಠಾಣೆಯ ಪೊಲೀಸರು ಯಶ್ವಿಯಾಗಿದ್ದಾರೆ.
ಸುಲೇಮಾನ್ ಸಿದ್ದಿ ( ಸಿದ್ದಿ ಓಣಿ ಲಕ್ಷ್ಮೇಶ್ವರ), ಇಸ್ಮಾಯಿಲ್ ಟಪಾಲ್ ( ಹಳೆ ಅಸರ ಓಣಿ ಲಕ್ಷ್ಮೇಶ್ವರ), ಸಂತೋಷ್ ಪಾಟೀಲ್ ( ಕೋರ್ಟ ಸರ್ಕಲ್ ಲಕ್ಷ್ಮೇಶ್ವರ), ಆಕಾಶ ಗಂಗಣ್ಣವರ ( ಹುಲಗೂರ್) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಹುಬ್ಬಳ್ಳಿ ನಗರದಲ್ಲಿ ಗಾಂಜಾ ಮಾರಾಟ ಮಾಡುತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿರೋ ಕಸಬಾ ಪೇಟ್ ಠಾಣೆಯ ಪೊಲೀಸರು 4 ಜನರನ್ನು ಬಂಧಿಸಿದ್ದಾರೆ. ಇನ್ನೂ ಬಂಧಿತರಿಂದ ಸುಮಾರು 62,050/- ರೂಪಾಯಿಗಳ ಮೌಲ್ಯದ 1240 ಗ್ರಾಂ ಗಾಂಜಾ ಮತ್ತು 400/- ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿಚಾರಣೆ ಪೂರ್ಣಗೊಳ್ಳಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಅಟ್ಟಿದ್ದಾರೆ .
ಈ ಕುರಿತು ಕಸಬಾಪೇಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.