
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂದು ಕಮಿಷನರೇಟ್ ವ್ಯಾಪ್ತಿಯ ರೌಡಿ ಶೀಟರ್ ಪರೇಡ್ ನಡೆಸಲಾಗಿದ್ದು, ಈ ವೇಳೆ ಓರ್ವ ರೌಡಿ ಶೀಟರ್ ಕೈ ಮೇಲೆ Maa ಹಚ್ಚೆ ನೋಡಿ ಪೊಲೀಸ್ ಕಮಿಷನರ್ ರೌಡಿ ಶೀಟರನನ್ನು ತರಾಟೆಗೆ ತೆಗೆದುಕೊಂಡು Maa ಪದದ ಅರ್ಥ ಹೇಳಿದ ಪ್ರಸಂಗ ನಡೆಯಿತು.
ಹುಬ್ಬಳ್ಳಿ ನಗರದ ಓಲ್ಡ್ ಸಿ ಆರ ಮೈದಾನದಲ್ಲಿ ರೌಡಿ ಶೀಟರ್ಗಳ ಪೆರೇಡ್ ನಡೆಸುವ ವೇಳೆ ಕೈಮೇಲೆ Maa ಎಂದು ಟ್ಯಾಟೂ ಹಾಕಿಸಿದ್ದನ್ನು ಗಮನಿಸಿದ ಕಮಿಶನರ್ ಎನ್ ಶಶಿಕುಮಾರವರು ರೌಡಿ ಶೀಟರನನ್ನು ತರಾಟೆಗೆ ತೆಗೆದಕೊಂಡರು. Maa ಎಂದರೆ ಏನು…? ಅದರ ಅರ್ಥ ಗೊತ್ತಾ ನಿಂಗೆ, ಇನ್ನೊಬ್ಬರ ತಾಯಿ ಕೊರಳಿಗೆ ಕೈ ಹಾಕುವಾಗ ನಿಮ್ಮ ಅಮ್ಮನ ನೆನಪು ಬರಲ್ವಾ ನಿಂಗೆ ಎಂದು ಕುಟುಕುವ ಮೂಲಕ ತಾಯಿ ಪದದ ಅರ್ಥವನ್ನು ಅವರ ಸ್ಟೈನಲ್ಲಿ ತಿಳಿಸಿಕೊಟ್ಟೂ ಖಡಕ್ ವಾರ್ನ್ ಮಾಡಿದರು.