
ಹುಬ್ಬಳ್ಳಿ
ಕುಡಿದ ಮತ್ತಿನಲ್ಲಿ ಕಾರ್ ಡ್ರೈವರ್ನ ನಿಯಂತ್ರಣ ತಪ್ಪಿ, ಲೈಟಿಂಗ್‌ಕಂಬ ಸೇರಿ ಟ್ರಾಪಿಕ್ ಸೂಚನಾ ಫಲಕಕ್ಕೆ ಗುದ್ದಿದ ಘಟನೆ ಹುಬ್ಬಳ್ಳಿಯ ಆನಂದ ನಗರದ ಮುಖ್ಯ ರಸ್ತೆಯ ನಾಗಲಿಂಗ ನಗರದಲ್ಲಿ ತಡರಾತ್ರಿ ನಡೆದಿದೆ.
ಆನಂದ ನಗರದಿಂದ ಬರುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಇನ್ನೂ ಕಾರನಲ್ಲಿ ನಾಲ್ಕು ಜನರು ಇದ್ದರು ಎಂಬ ಮಾಹಿತಿ ಇದೆ. ಡ್ರೈವರ್ ಕುಡಿದು ಓಡಿಸಿದ್ದಕ್ಕೆ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಟ್ರಾಪಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.