April 19, 2025

ಧಾರವಾಡ

ಶಾಲೆಯ ವಿದ್ಯಾರ್ಥಿಗಳಿಗೂ ಇಂದಿನ ವ್ಯಾವಹಾರಿಕ ಜ್ಞಾನ‌ ಜತೆಗೆ ಸಾಮನ್ಯ ಜ್ಞಾನ‌ ನೀಡುವ ನಿಟ್ಟಿನಲ್ಲಿಂದು ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ‌ ಮಕ್ಕಳ ಸಂತೆ ನಡೆಸಲಾಗಿದ್ದು, ಅರ್ಥಪೂರ್ಣವಾಗಿ ಮಕ್ಕಳ ಸಂತೆ ಜರುಗಿತು.

ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿಂದು ಮಕ್ಕಳು ತಮ್ಮ ತರಗಳಿಗಳ‌ ಬ್ಯಾಗ‌ ಸೇರಿ ತರಗತಿ ಸಾಮಗ್ರಿಗಳನ್ನು ಬಿಟ್ಟು, ತರಕಾರಿ ಸೇರಿ ಪದಾರ್ಥಗಳೊಂದಿಗೆ ಶಾಲಾ ಆವರಣಕ್ಕೆ ಬಂದು ವ್ಯಾಪಾರ ವಹಿವಾಟು ನಡೆಸಿದರು.

ಶಾಲೆಯ ಶಿಕ್ಷಕರು ಮಕ್ಕಳಿಗೆ ಮುಂದರ ನಿಂತು ವ್ಯವಹಾರ ಗ್ರಾಹಕರೊಂದಿಗೆ ಹೇಗೆ ಮಾಡಬೇಕು ಎಂಬುವುದರ ಕುರಿತು ಮಕ್ಕಳಿಗೆ ಸ್ಥಳದಲ್ಲೇ ಇದ್ದು ತಿಳುವಳಿಕೆ ನೀಡಿದರು. ಇನ್ನೂ ಮಕ್ಕಳ ಸಂತೆಗೆಂದು ಪಾನಿಪುರಿ ಸೇರಿ ಮೆಣಸಿಕಾಯಿ, ಟೊಮ್ಯಾಟೋ, ಗಜರಿ, ಶೆಂಗಾ, ಜೋಳ, ಇತ್ಯಾದಿ ದಿನಚರಿ ಆಹಾರ ಪದಾರ್ಥಗಳನ್ನು ಮಕ್ಕಳು ಸಂತೆಗೆ ತಂದು ಉತ್ಸಕತೆಯಿಂದ ಮಾರಾಟ ಮಾಡಿದರು. ‌ಮಕ್ಕಳ‌ ಪೋಷಕರು ತಮ್ಮ ಮಕ್ಕಳ‌ ಸಂತೆ ನೋಡಿ ಮನದಲ್ಲಿಯೇ ಸಂತಸ ಪಡುವುದರ ಜತೆಗೆ ಸಂತೆಯಲ್ಲಿ‌ ಗ್ರಾಹಕರಾಗಿ ಭಾಗಿಯಾದರು.‌ ಈ ಸಂದರ್ಭದಲ್ಲಿ ಶಾಲೆಯ ಪ್ರಾಧ್ಯಾಪಕರು. ಶಿಕ್ಷಕರು ಸೇರಿದಂತೆ ಎಲ್ಲ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!