ಹುಬ್ಬಳ್ಳಿ: ರೈಲ್ವೆ ಹಳ್ಳಿಯಲ್ಲಿ ಯುವಕನೋರ್ವನ ದೇಹ ಎರಡು ತುಂಡಾಗಿ ಯುವಕನ ಶವ ಪತ್ತೆಯಾಗಿರುವ ಘಟನೆ ಉಣಕಲ್‌ನ ಎಪಿಎಂಸಿ ಬಳಿಯ ರೈಲ್ವೇ ಹಳ್ಳಿಯಲ್ಲಿ ನಡೆದಿದ್ದು, ವ್ಯಕ್ತಿಯ ಮೃತ ದೇಹ ನೋಡಿದ ಸ್ಥಳೀಯರು ಬೆಚ್ಚಿಬಿದಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ 22 ವರ್ಷದ ನಾಗರಾಜ್ ಸಿದ್ದಪ್ಪ ಬಾರಕೇರ್ ಮೃತ ಯುವಕನೆಂದು ಗುರುತಿಸಲಾಗಿದೆ. ಹುಬ್ಬಳ್ಳಿ ಉಣಕಲ್‌ನ ಎಪಿಎಂಸಿ ಬಳಿಯ ಹೆಬ್ಬಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯ ರೈಲ್ವೇ ಹಳ್ಳಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಯುವಕ ಮೃತ ದೇಹ ರೈಲ್ವೇ ಹಳ್ಳಿಯ ಮೇಲೆ ಎರಡು ತುಂಡಾಗಿ ಬಿದಿದ್ದು, ಮೃತ ಯುವಕ ಇಂದು ಮಧ್ಯಾಹ್ನದ ನಂತರ ರೈಲ್ವೆ ಹಳಿ ಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತಿವಾಗಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಹುಬ್ಬಳ್ಳಿ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಸದ್ಯ ಈಗ ಸ್ಥಳೀಯರ ಸಹಕಾರದೊಂದಿಗೆ ಯುವಕನ ಮೃತದೇಹ ಆಸ್ಪತ್ರೆಗೆ ರವಾನಿಸಿದ್ದಾರೆ. ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.