ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಲಾರಿಗಳ ಚಕ್ರಕ್ಕೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹುಬ್ಬಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ದಾರಾವತಿ ಶ್ರೀ ಅಂಜನೇಯ ಮಂದಿರ ಬಳಿ ನಡೆದಿದ್ದು, ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬ ಸಂಬಂಧಿಕರೊಂದಿಗೆ ಠಾಣೆ ಮುಂದೆ ನ್ಯಾಯಲ್ಕಾಗಿ ಆಗ್ರಹಿಸಿ ಮೀಟರ್ ಬಡ್ಡಿಕೋರರ ವಿರುದ್ಧ ಹಿಡಿಶಾಪ ಹಾಕಿದರು.
ಹುಬ್ಬಳ್ಳಿಯ ಉಣಕಲ್‌ನ ದುರ್ಗಮ್ಮನ ಓಣಿ ನಿವಾಸಿ ಸಿದ್ಧಪ್ಪ ಕೆಂಚಣ್ಣವರ(42) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯು ಮಹೇಶ್ ಚಿಕ್ಕವೀರಮಠ್ ಎಂಬ ವ್ಯಕ್ತಿಯ ಬಳಿ 10 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಂಡಿದ್ದನಂತೆ. ತಗೊಂಡ ಸಾಲಕ್ಕೆ 65 ಲಕ್ಷ ಬಡ್ಡಿ ತುಂಬಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟು, ಬೈಕ್ ಚಲಾಯಿಸುತ್ತಲೇ ಟ್ರಕ್ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಮನೆ ಮಗನ ಸಾವಿಗೆ ನ್ಯಾಯ ಬೇಕೆಂದು ಮೃತನ ಕುಟುಂಬಸ್ಥರು ಹಾಗೂ ಮೃತನ ಸಂಬಂಧಿ ಸೇರಿ ಸ್ನೇಹಿತರು ಗೋಕುಲ್ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಅಂಗಾಲಚುವುದರ ಜತೆಗೆ ಮೀಟರ್ ಬಡ್ಡಿಕೋರರ ವಿರುದ್ಧ ಹಿಡಿ ಶಾಪಹಾಕಿದರು.
ವಿಷಯ ತಿಳಿದು ಗೋಕುಲ್ ಪೋಲಿಸ್ ಠಾಣೆಗೆ ಆಗಮಿಸಿ ಹುಬ್ಬಳ್ಳಿ ಧಾರವಾಡ ಪೋಲಿಸ್ ಆಯುಕ್ತರಎನ್ ಶಶಿಕುಮಾರರವರು, ಮೃತನ ಕುಟುಂಬಸ್ಥರಿಗೆ ಧೈರ್ಯ ತುಂಬುವುದರ ಜತೆಗೆ ಸಿದ್ದಪ್ಪನ ಸಾವಿಗೆ ನ್ಯಾಯಕೊಡಿಸುವ ಭರವಸೆಯನ್ನು ನೀಡಿದ್ದು, ಸ್ಥಳೀಯ ಬಿಜೆಪಿ ಮುಖಂಡ ರಾಜಣ್ಣ ಕೊರವಿಯವರು ಕಮಿಷನರ್‌ಗೆ ಸಾಥ ನೀಡಿದರು.