ಧಾರವಾಡ
ಹಸುಗಳಿಗಾಗಿ ಸಂಗ್ರಹ ಮಾಡಿಟ್ಟಿದ ಮನೆಯ ಹಿಂಬದಿಯ ಬಣವಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಅರ್ಧದಷ್ಟು ಬಣವಿ ಬೆಂಕಿಗೆ ಆಹುತಿಯಾಗಿರೋ ಘಟನೆ ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದಲ್ಲಿಂದ ಮಧ್ಯಾಹ್ನ ನಡೆದಿದೆ.

ನುಗ್ಗಿಕೇರಿ ಗ್ರಾಮದ ಯಲ್ಲಪ್ಪ ಕಿಡತಾಲ ಅವರಿಗೆ ಸೇರಿದ ಮೇವಿನ ಬಣವಿ ಎಂದು ತಿಳಿದು ಬಂದಿದೆ. ಬಣವಿಗೆ ಬೆಂಕಿ ಹೊತ್ತಿಕೊಂಡ ಹಿನ್ನಲೆಯಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಹೋಗೆ ನೋಡುತ್ತಿದಂತೆ ಅಕ್ಕಪಕ್ಕದವರು ಬೆಂಕಿನಂದಿಸಲು ಮುಂದಾಗಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ.

