April 19, 2025

ಧಾರವಾಡ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಧಾರವಾಡ ಕವಲಗೇರಿ ರಸ್ತೆಯ ರಾಹುಲ್ ಗಾಂಧಿ‌ನಗರದಲ್ಲಿನ ಮನೆ ಕಳ್ಳತನ ಪ್ರಲರಣಕ್ಲೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗದಗ ಮೂಲದ ಸುನೀಲ ಮುಳಗುಂದ ಬಂಧಿತ ಚಾಲಾಕಿ ಕಳ್ಳನಾಗಿದ್ದಾನೆ. ಕಳೆದ 2024 ಡಿಸೆಂಬರ 8 ರಂದು ಧಾರವಾಡ ಕವಲಗೇರಿ ರಸ್ತೆಯ ರಾಹುಲ್ ಗಾಂಧಿನಗರದಲ್ಲಿ‌ ಮನೆಯ ಕಳ್ಳತನ ನಡೆದಿತ್ತು. ಮನೆಯ ಮಾಲೀಕ ಅಂದು ಶಹರ ಠಾಣೆಗೆ ಬಂದು ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ತನಿಖೆಗೆ ಇಳಿದ ಪೊಲೀಸರು ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ 6ಲಕ್ಷ 45 ಸಾವಿರ ಮೌಲ್ಯದ 87 ಗ್ರಾಂ ಚಿನ್ನ‌, 507 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ‌ ಮಾಡಿದ್ದಾರೆ. ಇನ್ನೂ ಆರೋಪಿ ತನಿಖೆ ಪೂರ್ಣಗೊಂಡ ಹಿನ್ನಲೆಯಲ್ಲಿ ಸದ್ಯ ಬಂಧಿತನನ್ನು ನ್ಯಾಯಾಧೀಶರ‌ಮುಂದೆ ಹಾಜರುಪಡಿಸಿ ಕಂಬಿ ಹಿಂದೆ ತಳ್ಳಿದ್ದಾರೆ

Leave a Reply

Your email address will not be published. Required fields are marked *

error: Content is protected !!