
ಹುಬ್ಬಳ್ಳಿ
ಪ್ರೀತಿ ನೆಪವೊಡ್ಡಿ ಹಾಗೂ ಹಣದ ಆಸೆ ತೋರಿಸಿ ಯುವತಿಯರನ್ನು ತನ್ನ ಕಾಮದಾಟಕ್ಕೆ ಬಳಿಸಿಕೊಳ್ಳುವುದಲ್ದೆ, ಆ ಆಟ್ದ ವಿಡಿಯೋ ಸೆರೆ ಹಿಡಿದುಕೊಂಡು ವಿಷಯ ಹೊರ ಹೋಗದಂತೆ ಬೇದರಿಕೆ ಹಾಕುತ್ತಿದ್ದ ವಿಕೃತ ಕಾಮುಕನನ್ನು ಹುಬ್ಬಳ್ಳಿಯ ಕಸಬಾ ಪೇಟ ಖಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಶರಾವತಿನಗರದ ಕೆಇಬಿ ಲೇಔಟ್ ನಿವಾಸಿ ಹಾಗೂ ಝರಾಕ್ಸ್ ಅಂಗಡಿ ಮಾಲೀಕ ಅಶ್ಪಾಕ್ ಜೋಗನಕೊಪ್ಪ (38) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಝರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಸ್ಟೋರ್ ಇಟ್ಟುಕೊಂಡಿದ್ದಾನೆ. ಅಂಗಡಿಗೆ ಬರುವ ಬಡ ಯುವತಿಯರನ್ನು ಟಾರ್ಗೆಟ್ ಮಾಡಿ, ಅಪ್ರಾಪ್ತ ಹೆಣ್ಣುಮಕ್ಕಳನ್ನು ಹಣದ ಆಸೆ ತೋರಿಸಿ ಸೆಳೆಯುವ ಮೂಲಕ ಕಾಮದಾಟಕ್ಕೆ ಬಳಸಿಕೊಳ್ಳುತ್ತಿದ್ದ ಎಂಬ ಗಂಭೀರ ಆರೋಪದ ಮೇಲೆ ವಿಕೃತಿ ಮನಸ್ಥಿತಿ ಕಿರಾತಕ ಪೊಲೀಸರ ಅತಿಥಿಯಾಗಿದ್ದಾನೆ.
ಅಷ್ಟೇ ಅಲ್ಲದೆ ವಿಡಿಯೋ ಕಾಲ್ ನಲ್ಲಿ ಹೆಣ್ಣು ಮಕ್ಕಳ ಬಟ್ಟೆ ಬಿಚ್ಚಿಸಿ, ನಗ್ನ ಚಿತ್ರ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನೆಂಬ ಆರೋಪವೂ ಇದೆ.ಅಪ್ರಾಪ್ತ ಬಾಲಕಿಯ ಪೋಷಕರ ದೂರಿನ ಮೇರೆಗೆ ಝರಾಕ್ಸ್ ಅಂಗಡಿ ಮಾಲೀಕನನ್ನ ಕಸಬಾಪೇಟ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಅವರ ನೇತೃತ್ವದ ತಂಡ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದು, ಬಂಧಿತ ಸೈಕೋ ಕಾಮಿ ಮೊಬೈಲ್‌ನಲ್ಲಿ ಪೊಲೀಸರಿಗೆ ಹತ್ತಕ್ಕೂ ಹೆಚ್ಚು ಮಹಿಳೆಯರೊಂದಿಗಿನ ರಾಸಲೀಲೆ ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಈಗ ಕಸಬಾ ಠಾಣೆಯ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.