ಹುಬ್ಬಳ್ಳಿಯಲ್ಲಿ ಮಾನವೀಯತೆ ಮೇರೆದ ಸಂಚಾರಿ ಪೊಲೀಸ್… ಮೋರ್ಛೆ ರೋಗದಿಂದ ಕುಸಿದು ಬಿದ್ದವನ್ನು ಆರೈಕೆ, ಸಾರ್ವಜನಿಕರ ಮೆಚ್ಚುಗೆ.
ಹುಬ್ಬಳ್ಳಿ- ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೋರ್ಛೆ ರೋಗದಿಂದ ಕುಸಿದು ಬಿದ್ದದನ್ನು ನೊಡಿ ತನ್ನ ಕರ್ತವ್ಯದ ನಡುವೆಯೂ ಬಿದ್ದ ವ್ಯಕ್ತಿಯನ್ನು ರಕ್ಷಿಸಿ ಆರೈಕೆ ಮಾಡಿ ಹುಬ್ಬಳ್ಳಿಯಪೂರ್ವ ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ಮಾನವೀಯತೆಯ ಮೆರೆಯುವುದರ ಜತೆಗೆ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.
ನಗರದ ಕಿತ್ತೂರು ಚೆನ್ನಮ್ಮ ವೃತ್ತದ ಬಳಿಯಲ್ಲಿ ಹಿರಿಯ ನಾಗರಿಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮೆರವಣಿಗೆ ನಡೆಸುತ್ತಿದ್ದ ವೇಳೆ, ಏಕಾಏಕಿ ಪಾದಾಚಾರಿಯೊಬ್ಬರು ಕುಸಿದು ಬಿದಿದ್ದಾರೆ. ಇದನ್ನು ಹತ್ತಿರದಲ್ಲೇ ಇದ್ದ ಪೂರ್ವ ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿ ಮಂಜುನಾಥ ಗ್ಯಾನಪ್ಪಯ್ಯನವರ ಗಮನಿಸಿ, ಕೂಡಲೇ ವ್ಯಕ್ತಿಯನ್ನು ರಕ್ಷಿಸಿ ನೀರು ನೀಡಿ ವ್ಯಕ್ತಿಯನ್ನು ಆರೈಕೆ ಮಾಡಿ ರಕ್ಷಣೆ ಮಾಡಿದ್ದಾರೆ. ಸಂಚಾರಿ ಪೊಲೀಸ ಮಂಜುನಾಥ ಅವರಿಗೆ ಸ್ಥಳೀಯ ಸಾರ್ವಜನಿಕರು ಕೂಡಾ ಕೈ ಜೋಡಿಸಿ ವ್ಯಕ್ತಿಯನ್ನು ಆರೈಕೆ ಮಾಡಿದ್ದು, ಮಾನವೀಯತೆ ಮೇರೆದಿದ್ದಾರೆ.
ಪೂರ್ವ ಸಂಚಾರಿ ಠಾಣೆಯ ಪೊಲೀಸ ಸಿಬ್ಬಂದಿ ಮಂಜುನಾಥ ಗ್ಯಾನಪ್ಪಯ್ಯನವರ ಹಾಗೂ ಸ್ಥಳೀಯರ ಮಾನವೀಯತೆ ಕಾರ್ಯದಿಂದ ಮೋರ್ಛೆ ಹೋಗಿದ್ದ ವ್ಯಕ್ತಿಯು ಕೆಲ ಸಮಯ ನಂತರ ಸುಧಾರಿಸಿಕೊಂಡು ಬಳಿಕ ಮನೆಗೆ ತೆರಳಿದ್ದಾರೆ. ಆದರೆ ಇಲ್ಲಿ ತಮ್ಮ ಕರ್ತವ್ಯದ ನಡುವೆಯೂ ಸಂಚಾರಿ ಪೊಲೀಸ್ ಮಾನವೀಯತೆ ಮೇರೆಯುವುದರ ಜತೆಗೆ ಸಾಮಾಜಿಕ ಜವಾಬ್ದಾರಿ ಮೇರೆದು ಉಳಿದವರಿಗೂ ಮಾದರಿಯಾಗಿದ್ದಾರೆ.