
ಹಿರಿಯ ಜೀವವೊಂದು ಬಾವಿಗೆ ಹಾರಿ ಆತ್ಹತ್ಯೆಗೆ ಶರಣಾಗಿರೋ ಹೃದಯ ವಿದ್ರಾವಕ ಘಟನೆ ಧಾರವಾಡದ ಮಾಳ್ಳಮಡ್ಡಿಯಲ್ಲಿಂದು ನಡೆದಿದ್ದು, ಹಿರಿಯ ಜೀವ ಬಾವಿಗೆ ಹಾರೋ ದೃಶ್ಯ ಸಿಸಿಟಿವಿಯಲ್ಲಿಯಲ್ಲಿ ಸೆರೆಯಾಗಿದೆ.
ಧಾರವಾಡ ಮಾಳ್ಳಮಡ್ಡಿಯ ನಿವಾಸಿ ಸುರೇಶ ಕುಲಕರ್ಣಿ (68) ಎಂಬುವವರೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನ ಬಾವಿಯ ಬಳಿ ಬಂದ ಸುರೇಶ್ ಅವರು, ಬಾವಿ ಬಳಿ ಚಪ್ಪಲಿ ಹಾಗೂ ಮೊಬೈಲ್ ಫೋನ್ ಬಿಟ್ಟು ಬಾವಿಗೆ ಹಾರಿದ್ದಾರೆ. ಈ ಬಾವಿ ಸಾಕಷ್ಟು ಆಳವಾಗಿದೆ ಎಂದು ಹೇಳಲಾಗುತ್ತಿದೆ. ಸುರೇಶ್ ಅವರು ಮನೆಯಿಂದ ಹೊರ ಹೋಗಿದ್ದರಿಂದ ಅವರಿಗಾಗಿ ಮನೆಯವರು ಹುಡುಕಾಟ ನಡೆಸಿದ್ದಾರೆ. ಬಾವಿಯ ಬಳಿ ಅವರ ಚಪ್ಪಲಿ ಮತ್ತು ಮೊಬೈಲ್ ಕಂಡು ಮನೆಯವರು ಗಾಬರಿಗೊಂಡಿದ್ದಾರೆ. ಅಕ್ಕಪಕ್ಕದ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸುರೇಶ್ ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಕಂಡು ಬಂದಿದೆ. ಸುರೇಶ್ ಅವರು ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಗೊತ್ತಾಗಿಲ್ಲ. ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹ ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿಯವರು ಪ್ರಯತ್ನಿಸುತ್ತಿದ್ದಾರೆ. ವಿದ್ಯಾಗಿರಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಬ್ಲಿಕ್ ರೈಡ್ ಧಾರವಾಡ