
ಹುಬ್ಬಳ್ಳಿ: ವೈದ್ಯಕೀಯ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಕ್ಯಾಂಟರ್ ವಾಹನವೊಂದ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಗಾಮನಗಟ್ಟಿಯ ಹೊರವಲಯದ ತಾರಿಹಾಳ ರಸ್ತೆಯಲ್ಲಿ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಗ್ರಾಮದ ಹೊರವಲಯದ ತಾರಿಹಾಳ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಚಾಲಕನ ಅತೀಯಾದ ವೇಗವೆ ಈ ದುರ್ಘಟನೆಗೆ ಕಾರಣವೆಂದು ಸ್ಥಳೀಯರಿಂದ ತಿಳಿದು ಬಂದಿದೆ.
ಇನ್ನೂ ಕ್ಯಾಂಟರ್ ವಾಹನವು ಧಾರವಾಡ ಎಸ್‌ಡಿಎಂ ಆಸ್ಪತ್ರೆಯ ವೈದ್ಯಕೀಯ ವೇಸ್ಟ್ ತುಂಬಿಕೊಂಡು ತೆರಳುತಿತ್ತು ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಕ್ಯಾಂಟರ್ ವಾಹನ ಚಾಲಕ ಹಾಗೂ ಕ್ಲೀನರಗೆ ಸಣ್ಣಪುಟ್ಟ ಗಾಯವಾಗಿದೆ. ಇದೇ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಅಪಘಾತವಾಗುವ ಸಮಯದಲ್ಲಿ ಬೇರೆ ವಾಹನಗಳ ಸಂಚಾರ ಇಲ್ಲದಿರುವುದು ಅನಾಹುತವೊಂದು ತಪ್ಪಿದೆ. ಸದ್ಯ ಈಗ ಸ್ಥಳದಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ನವನಗರ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.