
ಅಪಘಾತ ಸುದ್ದಿ ⇒ ಹುಬ್ಬಳ್ಳಿ
ಕಾರವಾರ/ಹುಬ್ಬಳ್ಳಿ – ಚಾಲಕನ ನಿಯಂತ್ರಣ ತಪ್ಪಿ ತರಕಾರಿ ತುಂಬಿದ್ದ ಮಿನಿ ಗೂಡ್ಸ್ ವಾಹನ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿಯೇ 9 ಜನ ಅಸುನೀಗಿ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿರು ಧಾರುಣ ಘಟನೆ ಯಲ್ಲಾಪುರ ರಸ್ತೆಯ ಅರೆಬೈಲ್ ಸಮೀಪ ನಡೆದಿದೆ.
ಹಾವೇರಿ ಜಿಲ್ಲೆಯ ಸವಣೂರಿನಿಂದ ಕುಮಟಾ ಸಂತೆಗೆ ತೆರಳುತ್ತಿದ್ದ ತರಕಾರಿ ತುಂಬಿದ ಲಾರಿಯೇ ಅಪಘಾತಕ್ಕೆ ಒಳಗಾಗಿರುವ ವಾಹನವಾಗಿದೆ. ತೀವೇಗವಾಗಿ ತೆರಳುತ್ತಿದ್ದ ವೇಳೆ ಪಲ್ಟಿಯಾದ ಹಿನ್ನಲೆಯಲ್ಲಿ, 9 ಜನರು ಸ್ಥಳದಲ್ಲಿಯೇ ಪ್ರಾಣ ಕಳೆದು ಕೊಂಡಿದ್ದಾರೆ. ಇನ್ನೂ ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರಿಗೆ ಗಂಭೀಇರ ಸ್ವರೂಪ ಗಾಯಗಳಾಗಿದ್ದು, ಗಂಭೀರ ಗಾಯಾಳುಗಳನ್ನುಹುಬ್ಬಳ್ಳಿಕಿಮ್ಸ ಆಸ್ಪತ್ರೆಗೆ ರವಾನಿಸಿಲಾಗಿದೆ. ಮೃತ ಕೆಲವರ ದೇಹಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆ ರವಾನಿಸಿದ್ದಾರೆ.
ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.