April 19, 2025

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೋಮ್ಮೆ ಆಚರಣೆ ಮಾಡಲಾಗುವ ಶ್ರೀ ಮಹಾಲಕ್ಷ್ಮಿ ಜಾತ್ರೆಯನ್ನು ದಿನಾಂಕ 2025 ರ ಫೇಬ್ರುವರಿ 21 ರಿಂದ 25 ಫೇಬ್ರುವರಿ ವರೆಗೆ ಆಚರಣೆ ಮಾಡಲು ನೀಯೋಜಿಸಲಾಗಿದೆ.

ಇದರ ಅಂಗವಾಗಿ ದಿನಾಂಕ:11-11-2024 ರಂದು ದೇಣಿಗೆಯನ್ನು ಪ್ರಾರಂಭ ಮಾಡಲಾಯಿತು. ಮುಂಜಾನೆ ಜಾತ್ರೆಯ ಪಂಚ ಕಮೀಟಿಯವರು ಮೆರವಣಿಗೆಯ ಮೂಲಕ ದೇವರೆ ಇವರ ಮನೆಯಿಂದ ಭಂಡಾರದ ಕಟ್ಟಿಗೆಯನ್ನು ತೆಗೆದುಕೊಂಡು ಕಂಭಾರ ಗಲ್ಲಿಯ ಶ್ರೀ ಮಹಾಲಕ್ಷ್ಮೀ ಮಂದಿರದ ಮಾರ್ಗವಾಗಿ ಲಕ್ಷ್ಮೀ ಗಲ್ಲಿಯ ಶ್ರೀ ಮಹಾಲಕ್ಷ್ಮೀ ಮಂದಿರದ ಕಡೆಯಿಂದ ಮಾಳಿ ಗಲ್ಲಿಯಲ್ಲಿನ ಮಾನಕರಿ ಶ್ರೀ ಸದಾಶಿವ ಮಾಳಿ ಇವರ ಮನೆಯಿಂದ ವಿಧಿಪೂರ್ವಕವಾಗಿ ದೇಣಿಗೆ ತೆಗೆದುಕೊಂಡು, ಮತ್ತೆ 04 ಜನ ಮಾಳಿಗಳ ಮನೆಯಿಂದ ದೇಣಿಗೆ ಸ್ವೀಕಾರ ಮಾಡಿ ಗ್ರಾಮದಲ್ಲಿ ಜಾತ್ರೆಯ ದೇಣಿಗೆ ಸ್ವೀಕಾರ ಮಾಡಲು ಪ್ರಾರಂಭ ಮಾಡಿದರು. ಸದರಿ ದೇಣಿಗೆ ಪ್ರಾರಂಭ ಮಾಡುವ ಸಂದರ್ಭದಲ್ಲಿ ಪಂಚ ಕಮೀಟಿಯವರು, ಮಾನಕರಿ, ಗ್ರಾಮದ ಗ್ರಾಮಸ್ಥರು ಮತ್ತು ಪತ್ರಕರ್ತರು ಹಾಜರಿದ್ದರು.

ವರದಿಗಾರರು:ಸಂತೋಷ ನಿರ್ಮಲೆ

ಪಬ್ಲಿಕ್ ರೈಡ್ ನ್ಯೂಸ ಕಣಗಲಾ

Leave a Reply

Your email address will not be published. Required fields are marked *

error: Content is protected !!