
ಪಬ್ಲಿಕ್ ರೈಡ್ ಹುಬ್ಬಳ್ಳಿ
ಕಾಂಗ್ರೆಸ್ ನಾಯಕರೇ ವಕ್ಫ್ ಆಸ್ತಿ ಕಬಳಿಸಿದ್ದಾರೆ ಮೊದಲು ಕಾಂಗ್ರೆಸ್ ನಾಯಕರು ಕಬಳಿಸಿರೋ ಆಸ್ತಿ ವಶಪಡಿಸಿಕೊಳ್ಳಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು ಜಮೀರ್ ಅಹ್ಮದ್ ನನ್ನ ಹಳೆಯ ವಿಡಿಯೋ ಪ್ರದರ್ಶಿಸಿದ್ದಾರೆ ಅದನ್ನು ನಾನು ವಕ್ಫ್ ಮೀಟಿಂಗ್ ನಲ್ಲಿ ಮಾತನಾಡಿರೋದು ಅಲ್ಲ ವಕ್ಫ್ ಭವನ ಉದ್ಘಾಟನೆ ವೇಳೆ ಮಾತನಾಡಿದ್ದು. ಅನ್ವರ್ ಮನಿಪ್ಪಾಡಿ ಸಮಿತಿಯ ವರದಿ ಕುರಿತು ಬಗ್ಗೆ ಮಾತಾಡಿದ್ದೇನೆ.
ಹಲವಾರು ಜನ ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ ಅದರಲ್ಲಿ ಅಕ್ರಮ ಕಟ್ಟಡಗಳನ್ನು ಕಟ್ಟಿದ್ದಾರೆ ವಕ್ಫ್ ಹೆಸರಿನಲ್ಲಿದ್ದ ಸಾವಿರಾರು ಎಕರೆಯನ್ನು ಕಾಂಗ್ರೆಸ್ ನಾಯಕರು ಕಬಳಿಸಿದ್ದಾರೆ ಎಂದು ಆರೋಪಿಸಿದರು. ದೊಡ್ಡ ದೊಡ್ಡ ನಾಯಕರು ಕಬಳಿಸಿರುವ ಬಗ್ಗೆ ಅನ್ವರ್ ಮಣಿಪಾಡಿ ವರದಿಯಲ್ಲಿ ಸ್ಪಷ್ಟವಾದ ಉಲ್ಲೇಖವಿದೆ. ಕಾಂಗ್ರೆಸ್ ನಾಯಕರು ಅತಿಕ್ರಮ ಮಾಡಿರೋ ಆಸ್ತಿಯನ್ನು ವಶಕ್ಕೆ ಪಡಬೇಕೆಂದು ನಾನು ಹೇಳಿದ್ದೇನೆ. ರೈತರ ವಿಚಾರದಲ್ಲಿ ಬಿಜೆಪಿ ಸರ್ಕಾರ ನೋಟಿಸ್ ಕೊಟ್ಟಿಲ್ಲ.
ಯಾವುದೋ ಸಂದರ್ಭದಲ್ಲಿ ಮಾತನಾಡಿದ್ದನ್ನು ತೋರಿಸಿ ದಾರಿ ತಪ್ಪಿಸುವ ಕೆಲಸ ನಡೀತಿದೆ ರೈತರಿಗೆ ನೋಟಿಸ್ ಕೊಡುವ ಬದಲು ನಿಮ್ಮ ಕಾಂಗ್ರೆಸ್ ನಾಯಕರಿಗೆ ನೋಟಿಸ್ ಕೊಡಿ ಎಂದರು.
ಬೆಂಗಳೂರು ಸೇರಿ ಎಲ್ಲೆಲ್ಲಿ ಕಬ್ಜಾ ಮಾಡಿದ್ದಾರೆ ಅದನ್ನು ರಿಕವರಿ ಮಾಡಿ.ಕಾಂಗ್ರೆಸ್ ಪಕ್ಷವೇ ಅಲ್ಪಸಂಖ್ಯಾತರ ಭೂಮಿಯನ್ನು ಕಬಳಿಸಿದೆ.ಸಿಎಂ ಹೇಳಿರುವುದು ಕಣ್ಣೊರೆಸುವ ತಂತ್ರ. ಸದ್ಯಕ್ಕೆ ನೋಟಿಸ್ ವಾಪಸ್ ಪಡೆಯಬಹುದು. ಮುಂದೆ ಬೇಕಾದಾಗ ನೋಟಿಸ್ ಕೊಡಲೂಬಹುದು ಚುನಾವಣೆ ನಂತರ ನೋಟಿಸ್ ಕೊಡಲ್ಲ ಅಂತ ಏನು ಗ್ಯಾರಂಟಿ..? ರೈತರ ಬಗ್ಗೆ ಕಾಳಜಿ ಇದ್ದಲ್ಲಿ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದುಮಾಡಿ ನೋಟಿಫಿಕೇಶನ್ ರದ್ದುಮಾಡದೆ ನೋಟೀಸ್ ವಾಪಸ್ ಪಡೆಯೋದ್ರಿಂದ ಉಪಯೋಗವಿಲ್ಲ ಎಂದರು.