
ಪಬ್ಲಿಕ್ ರೈಡ್ ನ್ಯೂಸ್ ಬೆಂಗಳೂರು ಗ್ರಾಮಾಂತರ
ಆನೇಕಲ್ ತಾಲೂಕು ಆಡಳಿತ ಹಾಗೂ ಹಬ್ಬಗಳ ಆಚರಣ ಸಮಿತಿ ವತಿಯಿಂದ ಎಸ್.ಎಂ ಕುಮಾರಸ್ವಾಮಿ ರವರಿಗೆ ಪಟ್ಟಣದ ಎ ಎಸ್ ಬಿ ಕಾಲೇಜು ಮೈದಾನದಲ್ಲಿ ನಡೆದ 69ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ. ಶಿವಣ್ಣನವರು ತಹಸಿಲ್ದಾರ್ ಶಶಿಧರ ಮಾಡ್ಯಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ. ಮಂಜುನಾಥ್ ಪುರಸಭಾ ಅಧ್ಯಕ್ಷರಾದ ಸುಧಾ ನಿರಂಜನ್ ಕನ್ನಡ ಪರ ಹೋರಾಟಗಾರರಾದ ಸಿಂಗೇನಾಗ್ರಹರ ಎಸ್.ಕೆ ಗೌರೀಶ್ ರವರು ಎಸ್‌ಎಂ ಕುಮಾರಸ್ವಾಮಿ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಹೆಬ್ಬಗೋಡಿ ನಗರಸಭೆ ಅಧ್ಯಕ್ಷರಾದ ಪ್ರಮೀಳಾ ಪಿ. ರಾಮಚಂದ್ರ ಕನ್ನಡಪರ ದಲಿತ ಸಂಘಟನೆಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳು ಸರ್ಕಾರಿ ತಾಲೂಕು ಇಲಾಖೆಗಳ ಅಧಿಕಾರಿಗಳು ಸಾವಿರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರು ಇದೇ ಸಂದರ್ಭದಲ್ಲಿ ಉಪಸಿತರಿದ್ದರು.