
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ: ‘ಎಲ್ಲಾ ವರ್ಗದ ಜನರಿಗೆ ಸಮಗ್ರ ಸೇವೆಗಳನ್ನು ಸುಗಮವಾಗಿ ಪಡೆಯಲು ಬೆಂಗಳೂರು-ಒನ್ ಸೆಂಟರ್ ಗಳು ಸಹಕಾರಿ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು’, ಎಂದು ಶಾಸಕ ಎಸ್ ಮುನಿರಾಜು ಹೇಳಿದರು.
ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ನ ಮಾರುತಿ ಥಿಯೇಟರ್ ಸಮೀಪದಲ್ಲಿ ಅನಿತಾ ಹೆಚ್.ಎಂ ಹಾಗೂ ರಾಜಶೇಖರ್ ರವರ ನೇತೃತ್ವದಲ್ಲಿ ಆರಂಭವಾಗುತ್ತಿರುವ ಬೆಂಗಳೂರು-ಒನ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹೆಗ್ಗನಹಳ್ಳಿ ವಾರ್ಡ್ ನ ಮಾಜಿ ಬಿಬಿಎಂಪಿ ಸದಸ್ಯೆ ಭಾಗ್ಯಮ್ಮರವರ ಪತಿ ಕೃಷ್ಣಯ್ಯ,ಬಿಜೆಪಿ ಮುಖಂಡರು ಹಾಗೂ ಕೈಗಾರಿಕೋದ್ಯಮಿಗಳಾದ ದಿನೇಶ್, ರಾಜಗೋಪಾಲನಗರ ವಾರ್ಡ್ ಬಿಜೆಪಿ ಅಧ್ಯಕ್ಷರಾದ ನರಸಿಂಹಮೂರ್ತಿ ಮಂಗಳ ವಾಟರ್ ರಾಜಗೋಪಾಲನಗರ ವಾರ್ಡ್ ನ ಬಿಜೆಪಿ ಮಾಜಿ ಅಧ್ಯಕ್ಷರಾದ ನಾಗೇಶ್, ಮೋಹನ್(ಮೋಹನ್ ಎಲೆಕ್ಟ್ರಾನಿಕ್ಸ್), ಕಲ್ಪನಾ, ಬೆಂಗಳೂರು ಒನ್ (ಕರ್ನಾಟಕ ಒನ್) ಆಪರೇಷನ್ ಮ್ಯಾನೇಜರ್ ದೇವಿಕುಮಾರ್ ಶೆಟ್ಟಿ, ಕಂಪ್ಯೂಟರ್ ವಿಜಿ, ಹರೀಶ್, ಲೋಕೇಶ್, ಏಳುಮಲೈ, ರೇಣುಕಾ ಸೇರಿದಂತೆ ಹಲವಾರು ಸ್ಥಳೀಯ ಮುಖಂಡರು, ಸಾರ್ವಜನಿಕರು ಇದ್ದರು.