ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಯೂನಿವರ್ಸಲ್ ಡೆವಲಪ್ ಮೆಂಟ್ ಫೌಂಡೇಶನ್ ವತಿಯಿಂದ ಬೆಂಗಳೂರಿನ ಕುಮಾರ ಪಾರ್ಕ್ ಹತ್ತಿರ ಬಡವರಿಗೆ, ನಿರ್ಗತಿಕರಿಗೆ ಅನ್ನ ದಾಸೋಹ ಏರ್ಪಡಿಸಲಾಗುತ್ತಿದೆ.
ಈ ವೇಳೆ ಮಾತನಾಡಿದ ಫೌಂಡೇಶನ್ ಸಂಸ್ಥಾಪಕರಾದ ಭಾರತಿ ನಾಯಕ್,’ ನಮ್ಮ ಈ ಫೌಂಡೇಶನ್ ವತಿಯಿಂದ ಹಸಿದವರಿಗೆ ನಿರ್ಗತಿಕರಿಗೆ ವಾರದಲ್ಲಿ ಮಂಗಳವಾರ, ಗುರುವಾರ ಮತ್ತು ಶುಕ್ರವಾರದಂದು ಉಚಿತವಾಗಿ ಅನ್ನದಾನ ಮಾಡುವ ಸೇವಾ ಕೈಂಕರ್ಯ ಹಮ್ಮಿಕೊಂಡು ಬಡವರ ಹಸಿವು ನೀಗಿಸುವ ಕೆಲಸ ಮಾಡುತಿದ್ದೇವೆ’ಎಂದು ತಿಳಿಸಿದರು.
‘ನಮ್ಮ ಶಕ್ತಿಯ ಅನುಸಾರ ಬಡವರಿಗೆ ಕೈಲಾದ ಸಹಾಯವನ್ನು ಕೂಡ ಮಾಡುತ್ತಾ ಬಂದಿದ್ದೇವೆ. ಸಾವಿರಾರು ಬಡವರು ಬಂದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ’ ಎಂದು ಪದಾಧಿಕಾರಿ ಬಿ. ಸಾಗರ್ ತಿಳಿಸಿದರು.
ಈ ಸಂದರ್ಭದಲ್ಲಿ ಭಾರತಿ ನಾಯಕ್ ಅಮ್ಮ ಅವರ ಅಭಿಮಾನಿ ಬಳಗದವರು ಇದ್ದರು.
