April 19, 2025

ಧಾರವಾಡ

ಇತ್ತೀಚೆಗೆ ಧಾರವಾಡದಲ್ಲಿ ಕಳೆದೆರಡು ದಿನಗಳ ಹಿಂದೆ ಸುರಿದ ಧಾರಕಾರ ಮಳೆಗೆ ಧಾರವಾಡದ ಬೆಣಚಿ ಗ್ರಾಮ ಸೇತುವೆ ಕೊಚ್ಚಿ ಹೋಗಿದ್ದು, ಈಗ ಹಗ್ಗವೇ ಗ್ರಾಮಸ್ಥರಿಗೆ ಆಶ್ರಯವಾಗಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್ ತವರು ಕ್ಷೇತ್ರದ ಗ್ರಾಮಸ್ಥರು, ಜೀವ ಕೈಯಲ್ಲಿ ಹಿಡಿದು ಗ್ರಾಮಸ್ಥರು ಈಗ ಓಡಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ಧಾರವಾಡ ಜಿಲ್ಲೆಯ ಅಳ್ನಾವಾರ ತಾಲೂಕಿನ ಬೆಣಚಿ ಗ್ರಾಮದಲ್ಲಿ ಇತ್ತೀಚಿನ ಅತೀಯಾದ ಮಳೆಗೆ ಗ್ರಾಮಸ್ಥರ ಓಡಾಟಕ್ಕೆ ಕೊಂಡಿಯಾಗಿದ್ದ ಸೇತುವೆ ಕೊಚ್ಚಿ ಹೋಗಿದೆ.

ಇದರಿಂದಾಗಿ ಈಗ ಗ್ರಾಮಸ್ಥರು ಎರಡು ದಡ್ಡದ ನಡುವೆ ಹಗ್ಗವೊಂದನ್ನು ಕಟ್ಟಿಕೊಂಡು ಜೀವ ಭಯದಲ್ಲಿಯೇ ಹಗ್ಗ ಹಿಡಿದು ಓಡಾಡುವ ಸ್ಥಿತಿ ಬಂದಿದೆ. ಇನ್ನೂ ಪ್ರಾಣದ ಹಂಗು ತೊರೆದು ಹಗ್ಗದ ಸಹಾಯದಿಂದ ದಾಟುತ್ತಿರುವ ಗ್ರಾಮಸ್ಥರು ಸೇತುವೆ ಕ್ರಾಸ ಮಾಡುತ್ತಿದ್ದಾರೆ. ಈ ಹಿಂದೆ ಅಂದರೆ 2019ರಲ್ಲಿಯೇ ಈ ಸೇತುವೆ ಅರ್ಧ ಕೊಚ್ಚಿ ಹೋಗಿತ್ತಂತೆ. ಇದರ ಕುರಿತು ಜಿಲ್ಲಾ ಉಸ್ತುವಾರ ಸಚಿವ ಸಂತೋಷ ಲಾಡ್ ಅವರಿಗೆ ಗ್ರಾಮಸ್ಥರು ಹೊಸ ಸೇತುವೆ ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ‌ ಮಾಡಿದ್ದಾರೆ.

ಆದರೆ ಅದಕ್ಕೆ ಸ್ಪಂದನೆ ಸಿಗದೆ ಈಗ ಇದ್ದ ಅರ್ಧ ಸೇತುವೆಯು ಕೂಡಾ ಕೊಚ್ಚಿ ಹೋಗಿದ್ದು, ಉಸ್ತುವಾರಿ ಸಚಿವ‌ ಲಾಡ್ ಹಾಗೂ ಜಿಲ್ಲಾಡಳಿತ ವಿರುದ್ಧ ಗ್ರಾಮಸ್ಥರು ಮನದಲ್ಲಿಯೇ ಹಿಡಿ ಶಾಪ ಹಾಕುತ್ತಾ ಓಡಾಟ ಮಾಡುವಂತಾಗಿದೆ. ಈಗಲಾದ್ರೂ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಈ ಕಡೆ ಗಮನ ಹರಿಸಿ ಮುಂದೆ ಆಗುವ ಅನಾಹುತ ತಪ್ಪಿಸುತ್ತಾರೋ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!