
ಹುಬ್ಬಳ್ಳಿ
ಕಾಂಗ್ರೆಸ್ ಸರ್ಕಾರ ಹಳೇ ಹುಬ್ಬಳ್ಳಿ ಗಲಾಟೆಯ NIA ಇಂದ ತೆಗೆದು ಹಾಕಿದ್ದಾರೆ ಎಂದು ತಿಳಿದು ಬಂದಿದ್ದು, ಇದು ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣದ ಪರಾಕಷ್ಠೆ ಜತೆಗೆ ಕೈಗನ್ನಡಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣ ಬಹಳ ಸೀರಿಯಸ್ ಕೇಸ್ ಆಗಿದೆ. ಇದು ಹಿಂದೂ ಮುಸ್ಲಿಂ ಪ್ರಶ್ನೆ ಅಲ್ಲ. ದೇಶದ್ರೋಹಿ, ಸಮಾಜದ್ರೋಹಿಗಳ ಮದ್ಯೆ ಇರೋ ಹೋರಾಟ. ಭಾರತದ ಸಂವಿಧಾನ, ಕಾನೂನು ಮದ್ಯೆ ಆಗಿರೋ ಹೋರಾಟ. ಇದೊಂದು ಪ್ಲ್ಯಾನ್ಡ್ ಅಟೆಂಪ್ಟ್ ಆಗಿತ್ತು. ನಾನು ಯಾರ ಹೆಸರನ್ನು ತಗೆದುಕೊಳ್ಳಲು ಹೋಗಲ್ಲ.
ಅವತ್ತಿನ ಅಧಿಕಾರಿ ಸ್ವಲ್ಪದರಲ್ಲಿ ನಾನು ಬದಕಿದೆ ಎಂದು ಹೇಳಿದ್ರು. 155 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ರು. ಸುಪ್ರೀಂ ಕೋರ್ಟ್ ಬೇಲ್ ರಿಜಕ್ಟ್ ಮಾಡಿತ್ತು. ಸರ್ಕಾರ ಸರ್ಕಾರಿ ವಕೀಲರನ್ನು ಬದಲಾವಣೆ ಮಾಡಿ ,ಕಾಂಗ್ರೆಸ್ ಕೆಲವು ಮುಖಂಡರು, ಅಮಾಯಕರು ಎಂದು ಪತ್ರ ಬರೆದರು. ಹೋಮ್ ಮಿನಿಸ್ಟರ್ ಅದನ್ನು ರೆಕ್ಮೆಂಡ್ ಮಾಡಿದ್ರು. ಎರಡು ತಿಂಗಳ ಹಿಂದೆ ಅವರಿಗೆ ಜಾಮೀನು ಸಿಕ್ಕಿದೆ. ಸರ್ಕಾರ ಬಂದ ನಂತರವೂ ಜಾಮೀನು ತಡವಾಯ್ತು.
ಅತ್ಯಂತ ಗಂಭೀರ ಸೆಕ್ಷನ್ ಹಾಕಿ ಅರೆಸ್ಟ್ ಮಾಡಲಾಗಿತ್ತು.
16 C 18,20 ರ ಅಡಿ NIA ಚಾರ್ಜ್ ಶೀಟ್ ಫೈಲ್ ಆಗಿತ್ತು. ಸಂಘಟಿತ ಭಯೋತ್ಪಾದಕ ಕೃತ್ಯ ಎಂದು ಚಾರ್ಜ್ ಶೀಟ್. ಸರ್ಕಾರ ಕ್ಕೆ ಸಮಾಜದ ಹಿತ ಇದ್ರೆ ಕೇಸ್ ವಾಪಸ್ ಪಡೆಯೋಕೆ ಸಾಧ್ಯ ಇಲ್ಲ. ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಾರ್ಟಿ ಎನ್ನುವ ಮೂಲಕ ಕಿಡಿಕಾರಿದರು. ಜತೆಗೆ ಈ ಕೇಸ್ ವಾಪಸ್ ಪಡೆದು ಬಹುದೊಡ್ಡ ಕಂಟಕ ತಂದಿದ್ದಾರೆ. ನನಗೆ ಇದರ ಬಳಿ ಆರ್ಡರ್ ಕಾಪಿ ಇಲ್ಲ.
ಬಟ್ ನಾನು ಮಾಹಿತಿ ಆಧರಿಸಿ ಮಾತಾಡುತ್ತಿದ್ದೇನೆ, ಕೇಸ್ ವಾಪಸ್ ಪಡೆಯುತ್ತಾರೆ ಅಂದ್ರೆ ಇವರ ಉದ್ದೇಶ ಏನೂ..?, ದೇಶದಲ್ಲಿ 95 ಪರ್ಸೆಂಟ್ ನಕ್ಸಲ್ ಚಟುವಟಿಕೆ ಕಡಿಮೆ ಆಗಿದೆ. ಭಾರತ ಸರ್ಕಾರದ ಬಿಗಿಯಾದ ಕ್ರಮದಿಂದ ಕಡಿಮೆ ಆಗಿದೆ. ಕಾಂಗ್ರೆಸ್ ಸರ್ಕಾರ ಭಯೋತ್ಪಾದಕ ಕೃತ್ಯವನ್ನು ಮಾಡಲು ಪ್ರಯತ್ನ ಪಟ್ಟವರ ಕೇಸ್ ವಾಪಸ್ ಪಡತಿರೋದು ನಾನು ಖಂಡಿಸುತ್ತೇನೆ.
ಭಯೋತ್ಪಾದಕ ಇಸ್ಲಾಮ್ ಪರ ಕಾಂಗ್ರೆಸ್ ಇದೆ. ಇದು ಜನತೆಯ ಸುರಕ್ಷೆಯ ಪ್ರಶ್ನೆಯಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ತಗೆದುಕೊಳ್ಳಬೇಕು. ಇದು ಕಾಂಗ್ರೆಸ್ ಬಿಜೆಪಿ ಪ್ರಶ್ನೆ ಅಲ್ಲ. ಇದನ್ನು ನೋಡಿದ್ರೆ ಯಾವ ಪ್ರಮಾಣದಲ್ಲಿ ಮತಾಂಧತೆಯ ಪಿತ್ತ ನೆತ್ತಗೇರಿದೆ ಅನ್ನೋದು ಗೊತ್ತಾಗತ್ತೆ. ಇದು ಅಕಸ್ಮಾತ್ ನಿಜ ಆದರೆ ನಾವು ಕಾನೂನು ಹೋರಾಟ ಮಾಡತೀವೆ. ನಾಳೆ ಇಸ್ಲಾಂ ಮತಾಂಧ ಶಕ್ತಿಗಳು ಪೊಲೀಸ್ ಠಾಣೆ ಸುಟ್ಟು ಹಾಕಬಹುದು. ನಾವು ಹೋರಾಟ ಮಾಡ್ತೀವೆ ಎಂದರು. ನಾವು ಕೋರ್ಟ್ ನಲ್ಲಿ ಪ್ರಶ್ನೆ ಮಾಡತೀವೆ.
ನಾಳೆ ಇದಕ್ಕೆ ಸರ್ಕಾರ ಮಾಹಿತಿ ನೀಡದೆ ಹೋದರೆ ಖಂಡಿತ ಇದರ ಬಗ್ಗೆ ಹೋರಾಟ ಮಾಡತೀವೆ. ಮೊದಲ ಹಂತದಲ್ಲಿ ಸೋಮುವಾರ ಹೋರಾಟ ಮಾಡಲಾಗುವುದು. ನನಗಿರೋ ಮಾಹಿತಿ ಪ್ರಕಾರ NIA ಕೇಸ್ ಯಾವ ರಾಜ್ಯದವರು ವಾಪಸ್ ಪಡೆದಿಲ್ಲ.
ರಾಜ್ಯ ಸರ್ಕಾರ ವೋಟ್ ಬ್ಯಾಂಕ್ ರಾಜ ಕಾರಣಕ್ಕೆ ಏನಾದರೂ ಮಾಡಿರಬಹುದು ಎಂದು ಕುಟುಕಿದರು.