
ಧಾರವಾಡ
ಖಾಸಗಿ ಕಂಪನಿಯಲ್ಲಿನ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಅಪರಿಚಿತ ವಾಹನವೊಂದು ಹಿಂಟ್ ಆ್ಯಂಡ್ ರನ್ ಮಾಡಿದ ಪರಿಣಾಮ ಬಡ ಜೀವವೊಂದು ಬಲಿಯಾದ ದಾರುಣ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬೇಲೂರು ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ದಿನ ತಡ ರಾತ್ರಿ ನಡೆದಿದೆ.
ಧಾರವಾಡ ಸಾಧನಕೇರಿ ಮೂಲದ ಸಚಿನ್ ದೇಶಪಾಂಡೆ (48) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಬೇಲೂರು ಇಂಡಸ್ಟ್ರಿಯ ಕ್ರಸ್ಟ್ ಸ್ಪೆಷಾಲಿಟಿ ರೇಸಿಂಗ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇನ್ನೂ ಕಂಪನಿ ಕೆಲಸ ಮುಗಿಸಿಕೊಂಡು ಮನೆಯವರೊಂದಿಗೆ ಹಬ್ಬ ಆಚರಿಸಬೇಕಾಗಿದ್ದ ವ್ಯಕ್ತಿ, ಹಿಂಟ್ ಆ್ಯಂಡ್ ರನ್‌ನಿಂದಾಗಿ ಮಸಣ ಸೇರುವಂತಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗ್ರಾಮೀಣ ಠಾಣೆಯ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.