
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ಕೆಬಿಸಿ ಟ್ರಸ್ಟ್ ವತಿಯಿಂದ ಮಾಜಿ ನಗರ ಸಭಾ ಅಧ್ಯಕ್ಷರು ಹಾಗೂ ಕೆಬಿಸಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಕೆ.ಸಿ ಅಶೋಕ್ ರವರ ಹುಟ್ಟು ಹಬ್ಬದ ಪ್ರಯುಕ್ತ ಅಶೋಕ ಗ್ರೂಪ್ ಆಫ್ ‘ಇನ್ಸಿಟ್ಯೂಷನ್ ಆವರಣದಲ್ಲಿ ಅಕ್ಟೋಬರ್ 2ರಂದು 29ನೇ ವರ್ಷದ ಬೃಹತ್ ಆರೋಗ್ಯ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಸಿ ಅಶೋಕ್, ‘ಉತ್ತಮ ಆರೋಗ್ಯ ಕಾಪಾಡಿ ಕೊಳ್ಳುವುದು ಎಲ್ಲರಿಗೂ ಅಗತ್ಯವಾಗಿದ್ದು, ಕಾಲ ಕಾಲಕ್ಕೆ ಸೂಕ್ತವಾದ ತಪಾಸಣೆ ಮಾಡಿಕೊಂಡಾಗ ಪ್ರಾಥಮಿಕ ಹಂತದಲ್ಲಿಯೇ ಆರೋಗ್ಯದ ಗುಣಲಕ್ಷಣಗಳನ್ನು ಪತ್ತೆ ಹಚ್ಚಬಹುದಾಗಿದೆ. ಹಾಗಾಗಿ ಸಾಮಾನ್ಯ ಜನರ ಆರೋಗ್ಯ ಸುಧಾರಣೆಯ ಹಿತ ದೃಷ್ಟಿಯಿಂದ ನಮ್ಮ ಕೆಬಿಸಿ ಟ್ರಸ್ಟ್ ವತಿಯಿಂದ ಪ್ರತಿ ವರ್ಷವೂ ಉಚಿತವಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು’, ಎಂದು ಮನವಿ ಮಾಡಿದರು.
ಈ ಆರೋಗ್ಯ ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ, ಕಿವಿ ಮೂಗು ಗಂಟಲು, ಹೃದಯ ರೋಗ, ಕಿಡ್ನಿ ತಪಾಸಣೆ, ಚರ್ಮರೋಗ, ಡಯಾಲಿಸಿಸ್ ಕ್ಯಾನ್ಸರ್ ಸೇರಿದಂತೆ ಇನ್ನೂ ಹಲವಾರು ಖಾಯಿಲೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು. ಅವಶ್ಯಕತೆ ಇರುವವರಿಗೆ ವೈದ್ಯರ ಶಿಫಾರಸ್ಸಿನ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ರೋಷನ್ ಅಶೋಕ್, ದಕ್ಷಿಣ ಬೆಂಗಳೂರು ರೋಟರಿ ಡಾ. ಶ್ಯಾಮ್ ಸುಂದರ್, ಡಾ. ಲಿಂಗರಾಜು, ಸುರೇಶ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 080-23450848, 9880933918. ಸ್ಥಳ: ಅಶೋಕ್ ಗ್ರೂಪ್ ಆಫ್ ಇನ್ಸಿಟ್ಯೂಷನ್ ಆವರಣ, ಕೆಬಿ ಚಿಕ್ಕಮುನಿಯಪ್ಪ ಮುಖ್ಯರಸ್ತೆ, ಕಮ್ಮಗೊಂಡನಹಳ್ಳಿ, ಜಾಲಹಳ್ಳಿ ವೆಸ್ಟ್, ಬೆಂಗಳೂರು.