
ಧಾರವಾಡ
ಭಯೋತ್ಪಾದನೆ ವಿರುದ್ಧ ಇಸ್ರೇಲ್ ದಿಟ್ಟ ಹೆಜ್ಕೆ ಇಟ್ಟಿದೆ, ಇದೇ ಮಾದರಿ ಭಾರತದಲ್ಲಿಯು ಅವಶ್ಯಕತೆ ಇದೆ. ವಿ ಸಪೋರ್ಟ್ ಇಸ್ರೇಲ್, ನಾವು ಇಸ್ರೇಲ್ ನ್ನು ಬೆಂಬಲಿಸುತ್ತೇವೆ ಎಂದು ಧಾರವಾಡದಲ್ಲಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು, ಇಸ್ರೇಲ್ ದೇಶಭಕ್ತಿಯನ್ನು ನಾವು ಇವತ್ತು ಕಲಿಯಬೇಕಿದೆ. ಸಂಸಾರ ಭಕ್ತಿ, ಅಧಿಕಾರ ಭಕ್ತಿ ಅಷ್ಟೇ ಅಲ್ಲ, ದೇಶಭಕ್ತಿ ಅವರಿಂದ ಕಲಿಯಬೇಕು ನಾವು. ಇಡೀ ದೇಶದ ನೂರು ಕೋಟಿ ಹಿಂದೂಗಳು ಇಸ್ರೇಲ್ ಬೆಂಬಲಿಸಬೇಕು. ಭಯಂಕರವಾದ ಬಾಂಬ್, ಪಿಸ್ತೂಲ್ ಅಷ್ಟೇ ಅಲ್ಲ, ಲವ್ ಜಿಹಾದ್ ಸಹ ಭಯೋತ್ಪಾದನೆ. ವ್ಯಾಪಾರ ಜಿಹಾದ್, ಲ್ಯಾಂಡ್ ಜಿಹಾದ್ ಭಯೋತ್ಪಾದನೆ, ಅನೇಕ ಭಯೋತ್ಪಾದನೆ ಇಲ್ಲಿ ನಡೆಯುತ್ತಿದೆ. ಜನಸಂಖ್ಯೆ ಜಾಸ್ತಿ ಒಕ್ಫ್ ಬೋರ್ಡ್ ಸಹ ಭಯೋತ್ಪಾದನೆ. ಇದು ಇದಕ್ಕೆ ಉತ್ತರವೇ ಇಸ್ರೇಲ್. ಇಸ್ರೇಲ್ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಅವರಿಗೆ ಎಲ್ಲ ರೀತಿಯ ಸಪೋರ್ಟ್ ಸಿಕ್ಕರೆ ಮಾತ್ರ ನಮ್ಮ ದೇಶ ಉಳಿಯುತ್ತದೆ ಎಂದು ಹೇಳಿದರು.