
ಧಾರವಾಡ
ಲೆಬನಾನ್ ಮತ್ತು ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ಯದ್ಧ ನಡೆಸುತ್ತಿರುವ ನಡೆಯನ್ನು ಖಂಡಿಸಿ ಹಾಗೂ ತಕ್ಷಣವೇ ಉಭಯ ದೇಶಗಳು ಯುದ್ಧ ನಿಲ್ಲಿಸಿ ಶಾಂತಿ ಕಾಪಾಡುವಂತೆ ಆಗ್ರಹಿಸಿ, ಧಾರವಾಡದಲ್ಲಿ ಎಸ್‌ಯುಸಿಐ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿವೇಕಾನಂದ ವೃತದಲ್ಲಿ ಎಸ್‌ಯುಸಿಐ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಾರ್ಯಕರ್ತರು, ಇಸ್ರೇಲ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಲೆಬನಾನ್ ಮತ್ತು ಪ್ಯಾಲೆಸ್ಟೈನ್ ಮೇಲೆ ಇಸ್ರೇಲ್ ದಾಳಿಯಿಂದಾಗಿ ಅಲ್ಲಿಯ ಜನ ದಿನ ನಿತ್ಯವು ಜೀವ ಭಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಉಭಯ ದೇಶಗಲ್ಲಿ ಜನರು ಶಾಂತಿ ದಿನ ಕಳೆದಂತೆ ಮರೆಯಾಗುತ್ತಿದೆ.
ಇದು ಜಗತ್ತಿಗೆ ಮಾರಕವಾದ ವಾತಾವರಣ ನಿರ್ಮಾಣ ಮಾಡುತ್ತಿದೆ. ಹಾಗಾಗಿ ಉಭಯ ದೇಶಗಳಲ್ಲಿನ ನಾಗರಿಕರ ಶಾಂತಿಯ ಬದುಕು ಬಹಳ ಮುಖ್ಯವಾಗಿದೆ. ಜಗತ್ತಿನಲ್ಲಿ ಶಾಂತಿ ಸುವ್ಯವಸ್ಥೆ ಬದುಕು ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಉಭಯ ದೇಶಗಳು ದಾಳಿಗಳನ್ನು ನಿಲ್ಲಿಸಿ ಶಾಂತಿ ಸೌಹಾರ್ದತೆ ಸಾರಬೇಕಾಗಿದೆ ಎಂದು ಆಗ್ರಹಿಸಿದರು.