
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ಯಲಹಂಕ ನ್ಯೂ ಟೌನ್ ನ ವಿಷ್ಣು ಪಾರ್ಕ್ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷರು ಹಾಗೂ ಮಾಜಿ ಬಿಬಿಎಂಪಿ ವಿರೋಧ ಪಕ್ಷದ ನಾಯಕರು ಮತ್ತು ಮಾಜಿ ಬಿಬಿಎಂಪಿ ಸದಸ್ಯರಾದ ಅಬ್ದುಲ್ ವಾಜಿದ್ ರವರ ಹುಟ್ಟುಹಬ್ಬಕ್ಕೆ ಮಾಜಿ ಬಿಬಿಎಂಪಿ ಸದಸ್ಯರಾದ ಕೆ ನಾಗಭೂಷಣ್ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷರಾದ ಡಾ. ಎಸ್ ಮಂಜುನಾಥ್ (ಎಬಿಬಿ ಮಂಜಣ್ಣ) ರವರು ಶುಭ ಕೋರಿದರು.
ಈ ವೇಳೆ ಮಾತನಾಡಿದ ಮಾಜಿ ಬಿಬಿಎಂಪಿ ಸದಸ್ಯರಾದ ಕೆ ನಾಗಭೂಷಣ್, ‘ನಿಮ್ಮ ಅನುಭವ, ಜ್ಞಾನ ಮತ್ತು ಮಾರ್ಗದರ್ಶನವು ಎಲ್ಲರಿಗೂ ಸಿಗುವಂತಾಗಲಿ. ಹಾಗೆಯೇ ಆರೋಗ್ಯ ಮತ್ತು ಆಯುಷ್ಯದ ಭಾಗ್ಯ ನಿಮ್ಮದಾಗಲಿ’, ಎಂದು ಹಾರೈಸಿದರು.
ನಂತರ ಮಾತನಾಡಿದ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷರಾದ ಡಾ. ಎಸ್ ಮಂಜುನಾಥ್ (ಎಬಿಬಿ ಮಂಜಣ್ಣ), ‘ನಿಮ್ಮ ನಾಯಕತ್ವದ ಗುಣಗಳೇ ನಮಗೆ ಪ್ರೇರಣೆ. ಸಮಾಜದ ಪರಿವರ್ತನೆಯಲ್ಲಿ ನಿಮ್ಮ ಕೊಡುಗೆ ಅಮೂಲ್ಯವಾದದು. ನಿಮ್ಮ ಮಾರ್ಗದರ್ಶನದಲ್ಲಿ ನಾವೆಲ್ಲಾ ಮುಂದೆ ಸಾಗುತ್ತೇವೆ. ನಿಮಗೆ ಸಂತೋಷ, ಆರೋಗ್ಯ ಮತ್ತು ಯಶಸ್ಸು ಸಿಗಲಿ’, ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ಕಾಂಗ್ರೆಸ್ ಮುಖಂಡರುಗಳಾದ ರೂಪಾ, ಕೇಶವ್ ದಾಸ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.