
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚೊಕ್ಕಸಂದ್ರ ವಾರ್ಡ್ ನ ನೆಲಗದರನಹಳ್ಳಿ ಮುಖ್ಯರಸ್ತೆಯ ರುಕ್ಮಿಣಿನಗರದಲ್ಲಿ ರುಕ್ಮಿಣಿನಗರ ಯೂತ್ ಅಸೋಸಿಯೇಷನ್ ಯುವಕರ ತಂಡ ವತಿಯಿಂದ ಯುವ ಮುಖಂಡ ತೀರ್ಥೇಶ್ ನೇತೃತ್ವದಲ್ಲಿ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕ ಎಸ್ ಮುನಿರಾಜು ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬ್ಯಾಗ್ ಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಿದ ನಂತರ ಶಾಸಕ ಎಸ್ ಮುನಿರಾಜು, ಮಾತನಾಡಿ ಹಿಂದೂ ಧರ್ಮದಲ್ಲಿ ನಾವು ನಂಬುವುದು ದೇವರನ್ನು. ಹಿಂದೂ ಸಂಸ್ಕೃತಿಯಲ್ಲಿ ಹಲವಾರು ದೇವರನ್ನು ಪೂಜಿಸಿದರೂ ಗಣೇಶನ ಪೂಜೆಗೆ ಹೆಚ್ಚಿನ ಮಹತ್ವ ಹಾಗೂ ವಿಶೇಷತೆ ಕೊಡುತ್ತೇವೆ. ಹಾಗೆಯೇ ನಮ್ಮ ಯುವಕರು ಸರ್ಕಾರಿ ಶಾಲೆಯ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡುವ ಮೂಲಕ ಬೇರೆಯವರಿಗೆ ಮಾದರಿಯಾಗಿದ್ದಾರೆ’, ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುರೇಶ್, ರಾಜೇಶ್ ಸೇರಿದಂತೆ ರುಕ್ಮಿಣಿನಗರದ ನಾಗರೀಕರು, ಭಕ್ತಾದಿಗಳು ಉಪಸ್ಥಿತರಿದ್ದರು.