
ಪಬ್ಲಿಕ್ ರೈಡ್ ಹುಬ್ಬಳ್ಳಿ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸ್ ಗನ್ ಸದ್ದು ಮಾಡಿದೆ. ದರೋಡೆಕೋರ ಓರ್ವನನ್ನು ಕೃತ್ಯಕ್ಕೆ ಬಳಸಿದ ಸಾಮಗ್ರಿ ವಾಹನ ಸೇರಿ ಮತ್ತಷ್ಟು ಸಹಚರರ ಮಾಹಿತಿ ಸಂಗ್ರಹಕ್ಕೆ ಕರೆದೋಯೋ ಸಮಯದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡೇಟ ನೀಡಿದ್ದಾರೆ.
ದರೋಡೆ ಪ್ರಕರಣದ ಆರೋಪಿ ವಿನೋದ್ ಕಾಲಿಗೆ ಗುಂಡೆೆಟು ತಿಂದ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿ ವಿನೋಧನನ್ನು ಬೆಂಡಿಗೇರಿ ಠಾಣೆಯ ಪೊಲೀಸರು ದರೋಡೆ ಪ್ರಲರಣದಲ್ಲಿ ಬಂಧನ ಮಾಡಲಾಗಿತ್ತು. ಪ್ರಕರಣದ ಕುರಿತು ಮತ್ತಷ್ಟು ಆರೋಪಿ ಸುಳಿವು ಪಡೆಯುವ ನಿಟ್ಟಿನಲ್ಲಿ ಆರೋಪಿಯನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಹುಬ್ಬಳ್ಳಿ ಹೊರವಲಯದ ತಾರಿಹಾಳದ ಕಡೆ ಕರೆದಯಕೊಂಡು ಹೋಗಲಾಗಿತ್ತು. ಈ ವೇಳೆ ಆರೋಪಿ ವಿನೋದ್ ಎಸ್ ಐ ಜಯಶ್ರೀ ಸೇರಿ ಮೂವರು ಪೊಲೀಸ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಈ ವೇಳೆ ಎಸ್‌ಐ ಜಯಶ್ರೀಯವರು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿ, ಬಳಿಕ ಕಾಲಿಗೆ ಗುಂಡೇಟು ನೀಡಿದ್ದಾರೆ.
ಆರೋಪಿ ವಿನೋದ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದ್ದು, ಗುಂಡೇಟು ತಿಂದ ಆರೋಪಿ ವಿನೋದ್ ಹಾಗೂ ಹಲ್ಲೆಗೆ ಒಳಗಾದ ಗಾಯಾಳು ಎಸ್‌ಐ ಸೇರಿ ಪೊಲೀಸ್ ಸಿಬ್ಬಂದಿಗಳನ್ನು ಕಿಮ್ಸ್‌ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.