
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ:ರಾಜಗೋಪಾಲನಗರ ವಾರ್ಡ್ ನ ಕಸ್ತೂರಿ ಬಡಾವಣೆಯ 7ನೇ ಕ್ರಾಸ್ ನಲ್ಲಿ ಸೆವೆನ್ ಸ್ಟಾರ್ ವಿನಾಯಕ ಗೆಳೆಯರ ಬಳಗದ ವತಿಯಿಂದ 11ನೇ ವರ್ಷದ ಅದ್ದೂರಿ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ದಾಸರಹಳ್ಳಿ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಪಿಎನ್.ಕೃಷ್ಣಮೂರ್ತಿ ಅವರು ಆಗಮಿಸಿ ವಿನಾಯಕನಿಗೆ ಪೂಜೆ ಸಲ್ಲಿಸಿ ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಸಿ.ಎಸ್ ಟಿ ಬ್ಲಾಕ್ ಅಧ್ಯಕ್ಷ ಕೆ.ಸುಬ್ರಮಣಿ, ಕಾಂಗ್ರೆಸ್ ಯುವ ಮುಖಂಡ ದಿಲೀಪ್, ಸೆವೆನ್ ಸ್ಟಾರ್ ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳಾದ ಮಹಮ್ಮದ್ ಆಸಿಫ್, ರಾಕಿ, ಆದಿ, ವಿಜಯ್, ಆನಂದ, ಅನೀಶ್, ಭರತ್, ಅರ್ಜುನ, ಮುರಳಿ, ಮೋಹನ್, ದರ್ಶನ್, ಶರಣಬಸವ, ಹುಸೇನ್, ಅಮಿತ್, ಪವನ್ ಕುಮಾರ್, ಸಿದ್ದರಾಜು,ಅಜಿತ್ ಮುಂತಾದವರು ರಾಜಗೋಪಾಲನಗರ ಹಾಗೂ ಕಸ್ತೂರಿ ಬಡಾವಣೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.