
ಧಾರವಾಡ
ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಬೈಪಾಸ್‌ನಲ್ಲಿ ಟೋಲ್ ಹಣ ಭರಿಸಿ ಬೇಸತ್ತಿದ್ದ ವಾಹನ ಸವಾರರಿಗೆ ಈಗ ನದಿ ಹೈವೇ ಡೆವಲಪರ ಲಿಮಿಟೆಡ್ ಕಂನಿ ಸಿಹಿ ಸುದ್ದಿ ನೀಡಿದೆ. ಇದೇ ಸೆಪ್ಟೆಂಬರ್ 7 ರಿಂದ ಕಂಒನಿ ಗುತ್ತಿಗೆಯ ಅವಧಿ ಮುಕ್ತಾಯವಾಗಿದ ಹಿನ್ನಲೆ ಅವಳಿನಗರದ ರಾಷ್ಟ್ರೀಯ ಹೆದ್ದಾರಿ ಟೋಲ್ ಫ್ರೀ ಆಗಿದೆ.
1998ರಿಂದಲೂ ಹು- ಧಾ ಬೈಪಾಸ್ ನಿರ್ವಹಣೆ ಮತ್ತು ಟೋಲ್ ಸಂಗ್ರಹಣೆಯನ್ನು ನಂದಿ ಹೈವೇ ಡೆವಲಪರ್ ಲಿಮಿಟೆಡ್ ಕಂಪನಿ ಗುತ್ತಿಗೆ ಪಡೆದಿತ್ತು. ಈಗ ಗುತ್ತಿಗೆ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಟೋಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸುವ ನಿರ್ಧಾರ ಪ್ರಕಟಿಸಿದೆ.. ಈ ಕುರಿತು ಸುತ್ತೋಲೆಯ ಮೂಲಕ ತನ್ನ ನೌಕರರಿಗೆ ಹೊರಡಿಸಿರುವ ಕಂಪನಿಯ ಕಾರ್ಯಕಾರಿ ನಿರ್ದೇಶಕ ಶಿವಕುಮಾರ ಖೇಣಿ, ಸೆಪ್ಟೆಂಬರ್ 7 ರಿಂದ ರಸ್ತೆ ಬಳಕೆದಾರರ ಶುಲ್ಕ ಆಕರಣೆ ಕಾರ್ಯ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ನೀಡಿದೆ.
ಸದ್ಯ ಈಗ ನಂದಿ ಹೈವೇ ಡವಲಪರ್ ಅಧಿಕಾರಿಗಳು ಆದೇಶದಿಂದ ಹುಬ್ಬಳ್ಳಿ ಧಾರವಾಡ ರಾಷ್ಟ್ರೀಯ ಹೆದ್ದಾರಿ ಸಂಚಾರಿಗಳಿ ಸೇರಿ ಅವಳಿನಗರದ ಜನತೆಯು ನಿಟ್ಟುಸಿರು ಬಿಡುವಂತೆ ಆಗಿದೆ. ಇನ್ನೂ ಎಷ್ಟು ವರ್ಷ ಹುಬ್ಬಳ್ಳಿ – ಧಾರವಾಡ ಬೈಪಾಸ್ ರಸ್ತೆ ಪ್ರಯಾಣಿಕರು ಟೋಲ್ ಪಾವತಿಸಬೇಕು..?. ಈ ಟೋಲ್ ಪಾವತಿ ಮಾಡಿ ಮಾಡಿಯೇ ಸಾಕಾಗಿದೆ. ಜನರ ಜೇಬು ಖಾಲಿ ಮಾಡುವುದೇ ಸರ್ಕಾರದ ಉದ್ದೇಶವೇ..? ಎಂಬುವಂತೇ ಅಸಮಾಧಾನ ವ್ಯಕ್ತಪಡಿಸುತ್ತಾ ಓಡಾಟ ಮಾಡುತ್ತಿದ್ದ ವಾಹನ ಸವಾರರಿಗೆ ಈಗ ಫುಲ್ ಖುಷ್ ಆಗಿದೆ.