
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಮೇಲೆ ಅನುದಾನ ಕೊರತೆಯಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಕನಿಷ್ಠ ಮೂಲಭೂತ ಸೌಕರ್ಯಗಳಿಗೂ ಹಣ ಬಿಡುಗಡೆಯಾಗುತ್ತಿಲ್ಲ ಸರ್ಕಾರದ ಮಲತಾಯಿ ಧೋರಣೆ ಹೀಗೆ ಮುಂದುವರಿದರೆ ಸಿಎಂ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಶಾಸಕ ಎಸ್ ಮುನಿರಾಜು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಬಾಗಲಗುಂಟೆ ವಾರ್ಡಿನ ಶಿಡೆದಳ್ಳಿಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ವಿವೇಕ ಯೋಜನೆ ಅಡಿ ಸುಮಾರು 27.80 ಲಕ್ಷ ರೂ ಗಳಲ್ಲಿ ಎರಡು ಶಾಲಾ ಕೊಟ್ಟಡಿ ಚಿಕ್ಕಬಾಣವಾರದ ಉರ್ದು ಶಾಲೆಯಲ್ಲಿ 13 .93 ಲಕ್ಷ ರೂಗಳಲ್ಲಿ ಪ್ರಾಥಮಿಕ ಶಾಲಾ ಕೊಠಡಿ ಹಾಗೂ ಚಿಕ್ಕಬಾಣವಾರದಲ್ಲಿ 28 ಲಕ್ಷ ರೂಗಳಲ್ಲಿ ಪಶು ಚಿಕಿತ್ಸಾಲಯದ ಕಟ್ಟಡಗಳನ್ನು ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು ದಾಸಳ್ಳಿ ಕ್ಷೇತ್ರ ದೊಡ್ಡ ವಿಧಾನಸಭಾ ಕ್ಷೇತ್ರ ವಾಗಿದ್ದು ರೆವಿನ್ಯೂ ಬಡವನಗಳು ಹೆಚ್ಚು ಇದ್ದು ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ ಆದರೆ ಸರ್ಕಾರ ಯಾವುದಕ್ಕೂ ಅನುದಾನ ನೀಡುತ್ತಿಲ್ಲ ಕುಡಿಯುವ ನೀರಿನ ಸಮಸ್ಯೆ ಯಂತೂ ಇಂದಿಗೂ ಬಗೆಹರಿಸಿಲ್ಲ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜನರ ಅಶೋತ್ತರಗಳಿಗೆ ಸ್ಪಂದಿಸದೆ ಬರೀ ಹಣ ಲೂಟಿ ಯಲ್ಲಿ ನಿರತವಾಗಿದೆ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಪಾಲಿಗೆ ಸತ್ತೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಿ ಮರಿಸ್ವಾಮಿ ಪಿ ಎಚ್ ರಾಜು ರಘು ಸೂರ್ಯ ಭಾಗ್ಯಮ್ಮ ಹ್ಯೂಮನ್ ರೈಡ್ ಪ್ರೊಡಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿಎಂ ಚಿಕ್ಕಣ್ಣ ಚಿಕ್ಕ ಬಾಣವಾರ ಪುರಸಭೆಯ ಮುಖ್ಯ ಅಧಿಕಾರಿ ಹೆಚ್ಎ ಕುಮಾರ್ ಜಿಲ್ಲಾ ಪಂಚಾಯತ್ ಸಹಾಯಕ ಅಭಿಯಂತರರು ಶ್ರೀನಿವಾಸ್ ಇನ್ನು ಹಲವಾರು ಸ್ಥಳೀಯ ಮುಖಂಡರು ಭಾಗವಹಿಸಿದ್ದರು