
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯತೆ ಪಡೆದು ಈ ಭಾಗದಲ್ಲಿ ಬಡವರ ಸೇವೆಗೆ ಟೂಂಕ ಕಟ್ಟಿ ನಿಂತಿರುವ ಡಾ.ನಾಗೇಶ್ ಕುಮಾರ್ ಅವರು ಜನ್ಮದಿನದ ಪ್ರಯುಕ್ತ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಂತ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಬ್ಯಾಗ್ ಗಳನ್ನು ವಿತರಿಸುವ ಮುಖಾಂತರ ಜನ್ಮದಿನವನ್ನು ಸಾರ್ಥಕ ರೀತಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಶಾಸಕ ಎಸ್ ಮುನಿರಾಜು ಹೇಳಿದರು. ಅವರು ಜೈ ಮಾರುತಿ ಆಸ್ಪತ್ರೆ ಆವರಣದಲ್ಲಿ ಮಹೇಶ್ ಕುಮಾರ್ ಟೆಂಟ್ ಮಂಜಣ್ಣ ಹಾಗೂ ನಾಗೇಶ್ ಕುಮಾರ್ ಅಭಿಮಾನಿಗಳು ಆಯೋಜಿಸಿದ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿ ಮಾತನಾಡಿದರು ಈ ಸಂದರ್ಭದಲ್ಲಿ ಶುಭ ಕೋರಲು ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು ಈ ಸಂದರ್ಭದಲ್ಲಿ ದಾಸರಹಳ್ಳಿ ಮಂಡಲದ ಬಿಜೆಪಿ ಅಧ್ಯಕ್ಷ ಮೇದರಹಳ್ಳಿ ಸೋಮಶೇಖರ್ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿಎಸ್ ಗಂಗರಾಜು ರಾಜಗೋಪಾಲ್ ನಗರ ವಾರ್ಡ್ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಉದ್ಯಮಿ ಹಾಗೂ ಬಿಜೆಪಿ ಮುಖಂಡ ದಿನೇಶ್ ಸಂಘಟನಾ ಕಾರ್ಯದರ್ಶಿ ಸಪ್ತಗಿರಿ ಆನಂದ್ ಅಚ್ಚು ವೆಂಕಟೇಶ್ ಅರುಣ್ ಬೈಲಪ್ಪ ಗೋಪಾಲ್ ಕೆಂಪೇಗೌಡ ಗಂಗಣ್ಣ ಇನ್ನು ಹಲವಾರು ಸ್ಥಳೀಯ ಮುಖಂಡರು ಹಾಗೂ ನಾಗರಿಕರು ಕುಟುಂಬ ಸದಸ್ಯರು ಭಾಗವಹಿಸಿ ಶುಭ ಕೋರಿದರು.