
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ಜಿಕೆ ಡಬ್ಲ್ಯೂ ಲೇಔಟ್ ಉದ್ಯಾನವನದಲ್ಲಿ78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಬಿಜೆಪಿ ಮುಖಂಡ ಹಾಗೂ ಉದ್ಯಮಿ ಮತ್ತು ಸಣ್ಣ ಕೈಗಾರಿಕೆಗಳ ನಿರ್ದೇಶಕ ದಿನೇಶ್ ಅವರ ನೇತೃತ್ವದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸುರಾಜ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸುಜಾತ ಎಸ್. ಮುನಿರಾಜು ಅವರು ಧ್ವಜಾರೋಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ನರಸಿಂಹಮೂರ್ತಿ, ರಾಜಗೋಪಾಲನಗರ ವಾರ್ಡ್ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ,ಸಮಾಜ ಸೇವಕರಾದ ಡಾ.ಸಂಗಪ್ಪ ಬಸಪ್ಪ ಬಿರಾದಾರ್, ಸವಿತಾ ದಿನೇಶ್,ವಿಜಯ್ (ಕಂಪ್ಯೂಟರ್), ಉಮೇಶ್,ಶಂಕರಣ್ಣ, ಸೀತಾರಾಮ್, ನರಸಿಂಹಣ್ಣ, ವೈ ಜಿ.ನಾಗರಾಜ್, ರಾಮಯ್ಯ ಬಡಾವಣೆಯ ರವಿ, ಬಸಪ್ಪನ ಕಟ್ಟೆ ಕೆಂಪಣ್ಣ,ಮೋಹನ್ ಐಪಿ ನಗರ, ಏಳು ಮಲೆ, ರೇಣುಕಮ್ಮ,ಸಾವಿತ್ರಮ್ಮ ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.