
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಹೆಗ್ಗನಹಳ್ಳಿಯ ನ್ಯೂ ಬಾಲ್ಡ್ ವಿನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿಪ್ರೊಫೆಸರ್ ಡಾ.ಪುಷ್ಪ, ರಾಜ ಆಚಾರ್ಯ,ನ್ಯೂ ಬಾಲ್ಡ್ ವಿನ್ ಸಂಸ್ಥೆಯ ಸಂಸ್ಥಾಪಕರಾದ ವಿ.ಲೋಕೇಶ್ ಗೌಡ್ರು,ವೈಸ್ ಚೇರ್ಮನ್ ಬೆನಕ ಗೌಡ, ಶಾಲೆಯ ಪ್ರಾಂಶುಪಾಲರಾದ ಶ್ರೀನಿವಾಸ್ ಹಾಗೂ ಶಾಲೆಯ ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಶಾಲೆ ಸಂಸ್ಥಾಪಕರಾದ ವಿ.ಲೋಕೇಶ್ ಗೌಡ ಅವರು ಧ್ವಜಾರೋಹಣ ನೆರವೇರಿಸಿದರು.
ಇದೆ ವೇಳೆ ಶಾಲೆಯ ಸಂಸ್ಥಾಪಕರಾದ ವಿ.ಲೋಕೇಶ್ ಗೌಡ್ರು ನಾಡಿನ ಜನತೆಗೆ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ತಿಳಿಸಿದರು.