
ಪಬ್ಲಿಕ್ ರೈಡ್ ನ್ಯೂಸ್ ಬೆಂಗಳೂರು ಉತ್ತರ :ದಾಸನಪುರ ಹೋಬಳಿ ಕಡಬಗೆರೆ ಗ್ರಾಮ ಪಂಚಾಯಿತಿಯ 24-25ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷತೆಯಲ್ಲಿ ಕೆ ಎನ್ ಮುನಿರಾಜು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು
ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸಂಬಂಧಪಟ್ಟಂತ ಸಮಸ್ಯೆಗಳ ಚರ್ಚಿಸುವ ಮೂಲಕ ಆಲಿಸಿ ಶೀಘ್ರದಲ್ಲೇ ಮುಂದಿನ ದಿನಗಳಲ್ಲಿ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು ಕಾರ್ಯನಿರ್ವಣ ಅಧಿಕಾರಿ ಡಿ ಓ ರಮೇಶ್ ಮಾತನಾಡಿ. ಶಾಲಾ ಕಟ್ಟಡದ ಜೀರ್ಣೋದ್ಧಾರ ಮತ್ತು ಇನ್ನಿತರ ಪರಿಹಾರದ ಜೊತೆಗೆ 15ನೇ ಹಣಕಾಸಿನ ಆಯೋಗದಲ್ಲಿ ಪರಿಶೀಲಿಸಿ ಸರ್ಕಾರಿ ಅನುದಾನ ಡಿಯಲ್ಲಿ ಪಂಚಾಯತ್ ವ್ಯಾಪ್ತಿಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಜೊತೆಗೆ ಮನವಿ ಮಾಡಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಿದರು.
ನಂತರ ವ್ಯಾಪ್ತಿಯ ವಾರ್ಡ್ಗಳಲ್ಲಿ ವಿಕಲಚೇತನರಿಗೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದಂತ 16 ವಿದ್ಯಾರ್ಥಿಗಳಿಗೆ ಚೆಕ್ ಮುಖಾಂತರ ಪ್ರೋತ್ಸಾಹ ಧನ ನೀಡಲಾಯಿತು
ಇದೆ ಸಂದರ್ಭದಲ್ಲಿ ಪಂಚಾಯತಿ ಅದ್ಯಕ್ಷರು ಕೆ.ಎನ್. ಮುನಿರಾಜು ಉಪಾಧ್ಯಕ್ಷರು ನೇತ್ರಾವತಿ ನರಸಿಂಹ ಮೂರ್ತಿ. ಪಿಡಿಓ ಸುಮಲತಾ. ಸದಸ್ಯರಾದ ಶಶಿಕಲಾ ಹನುಮೇಗೌಡ್ರು, ಶೋಭ ನಾಗರಾಜು, ನವೀನ್ ಕುಮಾರ್ ಕೆಆರ್, ಶ್ರೀನಿವಾಸ್ ಮೂರ್ತಿ, ಜನಪ್ರಿಯ ಟೌನ್‌ಶಿಪ್ ಸೋಮಶೇಖರ್, ಅನಿತಾ( ಅಪ್ಪಿ ) ನಾಗರಾಜಯ್ಯ, ಸತ್ಯ ಭಾಮ, ಆಶಾ ನಾಗರಾಜ್, ಶ್ರೀಕಂಠಯ್ಯ, ಮುತ್ತುರಾಜ್, ಪುಟ್ಟಸ್ವಾಮಿ, ನಳಿನಿ ಬೆಟ್ಟೆಗೌಡ್ರು, ರುಕ್ಮಿಣಿ, ಕಾರ್ಯದರ್ಶಿ ರಂಗಸ್ವಾಮಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಈರೇಗೌಡ ಮತ್ತು ಕಡಬಗೆರೆ ಗ್ರಾಮಸ್ಥರು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು